Sunday, October 11, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಕ್ಷೇತ್ರ ಬದಲಾವಣೆ ಇಲ್ಲ: ಶಿಗ್ಗಾಂವಿಯಿಂದಲೇ ಸ್ಪರ್ಧೆ- ಸಿಎಂ ಬೊಮ್ಮಾಯಿ ಸ್ಪಷ್ಟನೆ.

ಕ್ಷೇತ್ರ ಬದಲಾವಣೆ ಇಲ್ಲ: ಶಿಗ್ಗಾಂವಿಯಿಂದಲೇ ಸ್ಪರ್ಧೆ- ಸಿಎಂ ಬೊಮ್ಮಾಯಿ ಸ್ಪಷ್ಟನೆ.

ಬೆಂಗಳೂರು,ಏಪ್ರಿಲ್,3,2023(www.justkannada.in):  ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರ ಬದಲಾವಣೆ ಮಾಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾವು ಮಾಡಿದ ಸಾಧನೆಯ ರಿಪೋರ್ಟ್ ಹಿಡಿದು  ನಾವು ಮತ ಕೇಳುತ್ತೇವೆ. ಕೊರೋನಾ ಮತ್ತು ಪ್ರವಾಹ ಸಂಧರ್ಭದಲ್ಲೂ ಅಭಿವೃದ್ಧಿ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದ ದುರಾಡಳಿತ ಬಗ್ಗೆಯೂ ಹೇಳುತ್ತೇವೆ. ಕಾಂಗ್ರೆಸ್ ನಾಯಕರು ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ.  ಆದರೆ ನಾವು ಧರ್ಮ ಜೋಡಣೆ ಕೆಲಸ ಮಾಡುತಿದ್ದೇವೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ 50ಕ್ಕೂ ಹೆಚ್ಚು ಹಗರಣಗಳು ನಡೆದಿದೆ.  ನಮ್ಮ ಸರ್ಕಾರದ ವೇಳೆ ಭ್ರಷ್ಟಾಚಾರ ವಿಚಾರದಲ್ಲಿ ರಾಜಿ ಇಲ್ಲ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ  ಕಾಂಗ್ರೆಸ್ ಗೆ ಇಲ್ಲ ಎಂದು ಕಿಡಿಕಾರಿದರು.ಕ್ಷೇತ್ರ ಬದಲಾವಣೆ ಇಲ್ಲ: ಶಿಗ್ಗಾಂವಿಯಿಂದಲೇ ಸ್ಪರ್ಧೆ- ಸಿಎಂ ಬೊಮ್ಮಾಯಿ ಸ್ಪಷ...

ನಾವು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ದುಡ್ಡೇ ದೊಡ್ಡಪ್ಪ ಬದಲಾಗಿ ದುಡಿಮೆಯೇ ದೊಡ್ಡಪ್ಪ ಆಗಿದೆ. ನನ್ನ ಸರ್ಕಾರದ ಆಡಳಿತಾತ್ಮಕ ನಿರ್ಧಾರದಿಂದ ರಾಜ್ಯ ಸದೃಢವಾಗಿದೆ  ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: contest-shiggavi- CM- Basavaraja Bommai