ಒಪ್ಪಂದದಂತೆ ಮೇಯರ್ ಸ್ಥಾನಕ್ಕೆ ಸ್ಪರ್ಧೆ: ಜಿಟಿ ದೇವೇಗೌಡರ ಸಲಹೆ ಸೂಚನೆ ಪಡೆದೇ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ ಎಂದ ಮಾಜಿ ಸಚಿವ ಸಾ.ರಾ ಮಹೇಶ್….

ಮೈಸೂರು,ಜ,18,2020(www.justkannada.in):  ಮೈಸೂರು ಮಹಾನಗರ ಪಾಲಿಕೆಯಲ್ಲಿ ದೋಸ್ತಿ ಮುಂದುವರೆದಿದ್ದು, ಮಾಡಿಕೊಂಡ ಒಪ್ಪಂದದಂತೆ ನಾವು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದೇವೆ. ಮಾಜಿ ಸಚಿವ  ಜಿಟಿ ದೇವೇಗೌಡರ ಸಲಹೆ ಸೂಚನೆ ಪಡೆದೇ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ ಎಂದು ಶಾಸಕ ಸಾ.ರಾ ಮಹೇಶ್ ತಿಳಿಸಿದರು.

ಮೇಯರ್ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸಾ.ರಾ ಮಹೇಶ್,  ಕಾಂಗ್ರೆಸ್ ಈ ಬಾರಿ ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಒಪ್ಪಂದದಂತೆ ಎಲ್ಲವು ನಡೆದಿದೆ. ಕಳೆದ ಬಾರಿ ಅವರು ಮೇಯರ್ ಆಗಿದ್ರು. ಈ ಬಾರಿ ನಾವು ಮೇಯರ್ ಆಗ್ತಿದ್ದೀವಿ ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದರು.

ಜಿಟಿಡಿಯವರು ನಿನ್ನೆಯೂ ಈ ಬಗ್ಗೆ ಮಾತನಾಡಿದ್ದಾರೆ. ಅವರ ಸಲಹೆ ಸೂಚನೆ ಪಡೆದೆ ಈ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಅವರು ಸ್ವಲ್ಪ ಬೇಜಾರಿನಲ್ಲಿ ಇದ್ದಾರೆ.  ಅವರೇ ನಮ್ಮ ನಾಯಕರು‌. ಅವರ ಅನುಪಸ್ಥಿತಿಯಲ್ಲಿ ನಾನು ಉಸ್ತುವಾರಿ ವಹಿಸಿಕೊಂಡು ಈ ಒಪ್ಪಂದದ‌ ಮಾತುಕತೆ ನಡೆಸಿದ್ದೇವೆ. ಅವರು ಆಕ್ಟಿವ್ ಆಗ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

Key words: Contest –mysore- mayor- position – contract-Former minister –Sara Mahesh