ಶ್ರೀ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗದಲ್ಲೇ ಮಂದಿರ ನಿರ್ಮಾಣ- ಶಾಸಕ ಜಿ.ಟಿ ದೇವೇಗೌಡ.

 ಮೈಸೂರು,ಜನವರಿ,20,2024(www.justkannada.in): ಶ್ರೀ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗದಲ್ಲೇ ಮಂದಿರ ನಿರ್ಮಾಣ ಮಾಡಲಾಗುತ್ತದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಶ್ರೀ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗದಲ್ಲೇ ಮಂದಿರ ನಿರ್ಮಾಣ ಮಾಡಲು ಜನವರಿ 22ರಂದೇ ಭೂಮಿಪೂಜೆ ಮಾಡಲಾಗುತ್ತದೆ. ಎಲ್ಲಾ ಜನರ ಬಳಿ ದೇಣಿಗೆ ಸಂಗ್ರಹ ಮಾಡಿ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.

ನಮ್ಮ ಜಮೀನಿನ ಕಲ್ಲು ರಾಮಲಲ್ಲಾ ಮೂರ್ತಿ: ಇದು ನಮ್ಮ ಪೂರ್ವ ಜನ್ಮದ ಪುಣ್ಯ.

ಈ ಕುರಿತು ಮಾತನಾಡಿರುವ ಜಮೀನು ಮಾಲೀಕ ರಾಮದಾಸ್,  ನಮ್ಮ ಜಮೀನಿನಲ್ಲಿ ಸಿಕ್ಕ ಕಲ್ಲು ಇಂದು ಮೂರ್ತಿಯಾಗಿದೆ. ಇದು ನಮ್ಮ ಪೂರ್ವ ಜನ್ಮದ ಪುಣ್ಯ. ನಮ್ಮ ಜಮೀನಿನಲ್ಲಿ ಸಾಕಷ್ಟು ಕಲ್ಲುಗಳು ಇದ್ದವು. ಜಮೀನಿನಲ್ಲಿ ವ್ಯವಸಾಯ ಮಾಡಲು ಆಗುತ್ತಿರಲಿಲ್ಲ. ವ್ಯವಸಾಯ ಮಾಡುವ ಸಲುವಾಗಿ ಕಲ್ಲು ತೆಗೆಸಲು ಮುಂದಾದೆವು. ಆದರೆ ನಮ್ಮ ಜಮೀನಿನಲ್ಲಿ ಸಿಕ್ಕ ಕಲ್ಲು ಇಂದು ಅಯೋಧ್ಯೆಯಲ್ಲಿ ಮೂರ್ತಿಯಾಗಿದೆ.  ಇದು ನಮಗೆ ಸಂತೋಷವಾಗಿದೆ. ಇದರ ಜೊತೆಯಲ್ಲಿ ನಮ್ಮ ಜಮೀನಿನಲ್ಲೇ ರಾಮಮಂದಿರ ನಿರ್ಮಾಣ ಮಾಡುತ್ತಿರುವುದು ಮತ್ತಷ್ಟು ಖುಷಿ ಹೆಚ್ಚಿಸಿದೆ. ಶಿಲೆ ಸಿಕ್ಕ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಒಪ್ಪಿದ್ದೇವೆ. ಜನವರಿ 22ಕ್ಕೆ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರಭು ಶ್ರೀರಾಮನ ದರ್ಶನಕ್ಕೆ ನಾವು ಸಹ ಹೋಗುತ್ತೇವೆ. ನಮ್ಮ ಜಮೀನಿನಲ್ಲಿ ಶಿಲೆ ಸಿಕ್ಕಿದರಿಂದ ಹಲವರು ದೂರವಾಣಿ ಮೂಲಕ ಶುಭ ಕೋರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Key words: Construction – temple – stone -found – Shri Ramlalla – MLA -GT Deve Gowda.