ನವ ಭಾರತ ನಿರ್ಮಾಣಕ್ಕೆ ಪಣ: ಯುವಜನ ಮಹೋತ್ಸವದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ.

ಮೈಸೂರು,ಆಗಸ್ಟ್,11,2022(www.justkannada.in):  ಇನ್ನು  25 ವರ್ಷದಲ್ಲಿ ದೇಶ ಸಮಗ್ರ ಅಭಿವೃದ್ಧಿ ಕಾಣಲು ಬಿಜೆಪಿ ಸರಕಾರ ಪಣ ತೊಟಿದ್ದು, ನವ ಭಾರತ ನಿರ್ಮಾಣವಾಗಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಯುವಜನ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಈ ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಅನಾಮಧೇಯ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ಆ ಅನಾಮಧೇಯ ಹೋರಾಟಗಾರರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಹಾಗಾಗಿ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮರ್ಪಿಸಲು ಮುಂದಾಗಿದ್ದೇವೆ. ಈ ಅಮೃತ ಮಹೋತ್ಸವದ ಸಂಭ್ರಮವನ್ನು ಅವರಿಗೆ ಅರ್ಪಣೆ ಮಾಡಲಾಗುವುದು ಎಂದರು.

ಈ ದೇಶದ ಗಡಿ ಕಾಯುತ್ತಿರುವ ಯೋಧರು, ರೈತರು, ಶ್ರಮ ಜೀವಿಗಳು ಶಿಕ್ಷಕರು ಹಾಗೂ ಯುವ ಶಕ್ತಿಗೆ ನನ್ನದೊಂದು  ದೊಡ್ಡ ಸಲಾಮ್. ಯುವಕರು ತಮ್ಮ ಭವಿಷ್ಯದ ಜೊತೆಗೆ ದೇಶದ ಭವಿಷ್ಯ ರೂಪಿಸಲು ಮುಂದಾಗಬೇಕು ಸ್ವಾತಂತ್ರ್ಯಕ್ಕಾಗಿ ಹಲವಾರು ಮಂದಿ ತ್ಯಾಗ, ಬಲಿದಾನ ಮಾಡಿದ್ದಾರೆ. ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಅದನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಆತ್ಮವಿಶ್ವಾಸವಿದ್ದರೆ ಸಾಧನೆ

ಯಶ್ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಮಾತ್ರವಲ್ಲ. ಅವರು ಯುವಕರ ಐಕಾನ್. ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗ ಅವರ ಕಡೆ ತಿರುಗಿ ನೋಡಿದೆ. ಕೆಜಿಎಫ್ 1, ಕೆಜಿಎಫ್ 2 ಚಿತ್ರಗಳ ಯಶಸ್ಸಿನ ಮೂಲಕ ಇಡೀ ದೇಶಕ್ಕೆ ಅವರು ರಾಕಿಂಗ್ ಸ್ಟಾರ್ ಆಗಿದ್ದಾರೆ. ಕನ್ನಡ, ಕನ್ನಡತನವನ್ನು ಇಡೀ ದೇಶದಾದ್ಯಂತ ಯಶ್ ಪಸರಿಸಿದ್ದಾರೆ. ಅವರಂತೆ ನೀವು ಆಗಬೇಕು. ಆತ್ಮವಿಶ್ವಾಸ ಇದ್ದರೆ ಯಾರು ಏನು ಬೇಕಾದರೂ ಆಗಬಹುದು ಎಂದರು.

ಮೈಸೂರು ಸಂಸ್ಥಾನದಲ್ಲಿ ಮಹಾರಾಜ, ಮಹಾರಾಣಿ ಇಬ್ಬರೂ ಮುಖ್ಯವಾಗಿದ್ದಾರೆ. ಹಾಗಾಗಿ ಮೈಸೂರಿನ ಮಹಾರಾಜ, ಮಹಾರಾಣಿ ಕಾಲೇಜುಗಳೆರಡನ್ನು ನವೀಕರಣ ಮಾಡುತ್ತೇವೆ. ಮಾನಸ ಗಂಗೋತ್ರಿಯಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡುತ್ತೇವೆ. ಮೈಸೂರಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇವೆ. ನರೇಂದ್ರ ಮೋದಿ ಅವರು ಯೋಗದಿನದಂದು ಮೈಸೂರಿಗೆ ಬಂದು ಹೋದ ಮೇಲೆ ಇಡೀ ದೇಶವೇ ಮೈಸೂರಿನ ಕಡೆ ಮುಖ ಮಾಡಿದೆ. ಹಾಗಾಗಿ ಮೈಸೂರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ವಿಮಾನ ನಿಲ್ದಾಣದ ರನ್‌ ವೇ ಅನ್ನು ವಿಸ್ತರಣೆ ಮಾಡಲಾಗುತ್ತಿದೆ. ಕೆ.ಆರ್.ಆಸ್ಪತ್ರೆಯನ್ನು ನವೀಕರಣ ಮಾಡಲಾಗುತ್ತಿದೆ. ಸೆಮಿ ಕಂಡಕ್ಟರ್ ಅನ್ನು ಮೈಸೂರಿನಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ಮೈಸೂರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿ 35 ಸಾವಿರ ಜನ ಸೇರಿದ್ದೀರಾ. ನೀವೆಲ್ಲಾ ನಿಮ್ಮ ಮನೆ, ಹಾಸ್ಟೆಲ್‌ ನಲ್ಲಿ ರಾಷ್ಟ್ರಧ್ವಜ ಹಾರಿಸಿ ಎಂದು ಕಿವಿಮಾತು ಹೇಳಿದರು.

ರಾಕಿಂಗ್ ಸ್ಟಾರ್ ಯಶ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್‌ಸಂಸದ ಪ್ರತಾಪಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ನಿರಂಜನ್ ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮೇಯರ್ ಸುನಂದ ಪಾಲನೇತ್ರ, ಡಿಸಿ ಡಾ.ಬಗಾದಿ ಗೌತಮ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ. ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಹಣಕಾಸು ಅಧಿಕಾರಿ‌ ಸಂಗೀತ ಭಟ್, ಸಿಂಡಿಕೇಟ್ ಸದಸ್ಯರಾದ ಡಾ.ಈ.ಸಿ.ನಿಂಗರಾಜು, ಡಾ.ಚೈತ್ರ ಸೇರಿದಂತೆ ಇತರರು ಇದ್ದರು.

Key words: construction – new India-CM -Bommai- Yuvajana Mahotsava-mysore

ENGLISH SUMMARY…

Vow to build New India: CM Bommai announces at the Yuvajana Mahotsav in Mysuru
Mysuru, August 11, 2022 (www.justkannada.in): “BJP has vowed to build for the overall development of India in the next 25 years, and a new Bharat will be built,” observed Chief Minister Basavaraj Bommai.
He participated in the Yuvajana Mahotsav organized by the University of Mysore, held at the Maharaja College grounds in Mysuru today. In his address after inaugurating the program, the Chief Minister said, “thousands of unknown or lesser known people have sacrificed their lives to make our country independent. But, there is no reference to them anywhere till now. That is why we have stepped forward to offer our salutes to such unknown freedom fighters. We dedicate this ‘Amruth Mahotsav’ celebrations to them.”
“My salutes to all the soldiers who are protecting our nation on the border, farmers, laborers, teachers, and the youth. The youth should step forward to build the future of our country along with shaping their future. Many people have sacrificed their lives for our independence. We didn’t get independence so easily. Hence, it is the responsibility of all of us to protect it,” he added.
On the occasion, he informed the airport runway in Mysuru is being extended. Other developmental works include renovation of the K.R. Hospital, the establishment of a semi-conductor unit in Mysuru and overall development of Mysuru in terms of tourism are on the cards. More than 35k people have gathered here today. I request you all to hoist the tricolor atop all your houses and hostels, he said.
Sandalwood’s rocking star Yash, Higher Education Minister Dr. C.N. Ashwathnarayana, MP Pratap Simha, MLAs G.T. Devegowda, Niranjan, L. Nagendra, MLC H. Vishwanath, Mayor Sunanda Phalanetra, Deputy Commissioner Bagadi Gowtham, University of Mysore Vice-Chancellor Prof. G. Hemanth Kumar, Registrar Prof. R. Shivappa, Examinations Registrar Prof. A.P. Jnanaprakash, Finance Officer Sangeetha Bhat, Syndicate members Dr. E.C. Ningaraju, Dr. Chaitra and others were present.
Keywords: University of Mysore/ CM Bommai/ Yuvjana Mahotsav