ಸೈನಿಕ ಸ್ಮಾರಕ ಭವನ ನಿರ್ಮಾಣ ಕಾರ್ಯದ ಜವಾಬ್ದಾರಿ ನಿರ್ಮಿತಿ ಕೇಂದ್ರಕ್ಕೆ : ಸಮಿತಿ ರಚಿಸುವಂತೆ ಡಿಸಿ ರೋಹಿಣಿ ಸಿಂಧೂರಿ ಸೂಚನೆ…

ಮೈಸೂರು, ಫೆಬ್ರವರಿ.10,2021(www.justkannada.in): ಮೈಸೂರು ನಗರದಲ್ಲಿ ಸೈನಿಕ ಸ್ಮಾರಕ ಭವನ ನಿರ್ಮಾಣ ಮಾಡುವ ಸಂಬಂಧ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ  ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.jk

ಈ ಸಭೆಯಲ್ಲಿ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೈನಿಕ ಸ್ಮಾರಕ ಭವನದ ನಿರ್ಮಾಣಕ್ಕಾಗಿ ಮೊದಲ ಕಂತಿನಲ್ಲಿ 50 ಲಕ್ಷವನ್ನು ಬಿಡುಗಡೆ ಮಾಡಲಾಗಿದ್ದು, ಸೈನಿಕ ಸ್ಮಾರಕ ಭವನದ ನಿರ್ಮಾಣದ ಕಾರ್ಯವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು.

ಆದರೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಿರ್ಮಾಣದ ಕೆಲಸವನ್ನು ವಿಳಂಬ ಮಾಡಿದ್ದರಿಂದ ಅನುದಾನವನ್ನು ವಾಪಸ್ಸು ಪಡೆದು, ನಿರ್ಮಾಣದ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರದವರು ವಹಿಸಿಕೊಳ್ಳುವಂತೆ ಡಿಸಿ ರೋಹಿಣಿ ಸಿಂಧೂರಿ ಸೂಚಿಸಿದರು.

ಸೈನಿಕರ ಸ್ಮಾರಕ ಭವನದ ನಿರ್ಮಾಣ ಕಾರ್ಯ ಕುರಿತಂತೆ ಪ್ರಗತಿಯನ್ನು ಗಮನಿಸಲು ಸಮಿತಿಯನ್ನು ರಚಿಸಿ, ನಿಗಧಿತ ವೇಳೆ ಕಟ್ಟಡ ಕಾಮಗಾರಿಯನ್ನು ಮುಕ್ತಾಯಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು.construction-army-memorial-building-responsible-nirmithi-centre-dc-rohini-sindhuri

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ನಿರ್ಮಿತಿ ಕೇಂದ್ರದ  ಮಂಜುನಾಥ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರುದ್ರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ENGLISH SUMMARY…

Responsibility of construction of Sainik Smaraka Bhavan to Nirmiti Kendra: DC Rohini Sindhuri instructs to form committee
Mysuru, Feb. 11, 2021 (www.justkannada.in): A meeting in the Chairmanship of the Deputy Commissioner of Mysuru was held today to discuss the construction of Sainik Smaraka Bhavan.
In her address, the Deputy Commissioner of Mysuru Rohini Sindhuri informed, “the Kannada and Culture Department has released a sum of Rs. 50 lakh as the first instalment for construction of the Sainik Smaraka Bhavan and the responsibility of its construction was earlier given to the Public Works Department. As the PWD officials delayed the construction works the grants have been withdrawn and I request the Nirmiti Kendra to take over the responsibility of its construction.”
She directed the officials concerned to form a committee to monitor the progress of the construction works and ensure its completion in the stipulated time.
Kannada and Culture Department Assistant Director H. Chennappa, Manjunath of Nirmiti Kendra, Horticulture Department Deputy Director Rudresh, and others took part in the meeting.
Keywords: Mysuru DC Rohini Sindhuri/ Sainik Smaraka Bhavana/ Nirmiti Kendra

Key words: construction – Army Memorial Building- Responsible-nirmithi centre-DC- Rohini Sindhuri