ಇಡೀ ದೇಶದಲ್ಲೇ ಮತಗಳ್ಳತನ: ಒಬ್ಬ ವ್ಯಕ್ತಿ ಒಂದು ಮತ ಹಕ್ಕಿನ ವಿರುದ್ದ ಆಯೋಗದ ನಡೆ- ರಾಹುಲ್ ಗಾಂಧಿ ಆಕ್ರೋಶ

ಬೆಂಗಳೂರು,ಆಗಸ್ಟ್,8,2025 (www.justkannada.in):  ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲೇ ಮತಗಳ್ಳತನವಾಗಿದೆ. ಒಬ್ಬ ವ್ಯಕ್ತಿ ಒಂದು ಮತ ಹಕ್ಕಿನ ವಿರುದ್ದ ಚುನಾವಣಾ ಆಯೋಗದ ನಡೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ಮತಗಳ್ಳತನ ಆರೋಪ ಮಾಡಿ ಚುನಾವಣಾ ಆಯೋಗದ ವಿರುದ್ದ ಬೆಂಗಳೂರಿನ  ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಪಾಲ್ಗೊಂಡು ರಾಹುಲ್ ಗಾಂಧಿ ಮಾತನಾಡಿದರು.

ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಒಂದೇ ಒಂದು ಮತದ ಹಕ್ಕು ನೀಡಲಾಗಿದೆ.  ಕಳೆದ ಚುನಾವಣೆಯಲ್ಲಿ ಮೋದಿ ಬಿಜೆಪಿ ಸೇರಿ ಸಂವಿಧಾನದ ಮೇಲೆ ದಾಳಿ ಮಾಡಿದ್ದಾರೆ. ನಾವು ಸಂವಿಧಾನವನ್ನ ರಕ್ಷಣೆ ಮಾಡಿದ್ದೇವೆ.  ಭಾರತದ ಸಂವಿಧಾನವನ್ನ ಮುಗಿಸಲು ಬಿಜೆಪಿ ಷಡ್ಯಂತ್ರ ಮಾಡಿತ್ತು.  ಸಂವಿಧಾನದಲ್ಲಿ ಭಾರತದ ನೂರಾರು ವರ್ಷಗಳ ಇತಿಹಾಸವಿದೆ. ಪ್ರತಿಯೊಬ್ಬ ಭಾರತೀಯನಿಗೂ ಮತದಾನದ ಹಕ್ಕಿದೆ. ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರ ಚುನಾವಣೆ ನಡೆಯಿತು. ಲೋಕಸಭೆ ಚುನಾವಣೆಯಲ್ಲಿ ಇಂಡಿಯಾಗೆ  ಅತಿಹೆಚ್ಚು ಸ್ಥಾನ ಬಂದಿತ್ತು. ಇದಾದ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ  ನಡೆದಿದೆ. ಆದರೆ ಆಗ ಬಿಜೆಪಿ ಗೆಲುವು ಸಾಧಿಸಿದೆ. ಇದರ ಹಿಂದಿನ ಕಾರಣ ಪತ್ತೆ ಹಚ್ಚಿದ್ದೇವೆ ಎಂದರು.

ಒನ್ ಮ್ಯಾನ್ ಒನ್ ವೋಟ್ ಎಂಬುದೇ ಸಂವಿಧಾನದ ಅಡಿಪಾಯ. ಹೀಗಾಗಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ನಾವು ಪರೀಕ್ಷೆಗೆ ಮುಂದಾಗಿದ್ದವು. ಈ ವೇಳೇ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 6.5 ಲಕ್ಷ ಮತವಿದ್ದವು. ಆದರಲ್ಲಿ 1 ಲಕ್ಷದ 250 ಮತಗಳ್ಳತನ ಆಗಿರೊದು ಪತ್ತೆಯಾಗಿದೆ. ಒಬ್ಬ ಮತದಾರ ಹಲವು ಬಾರಿ ಮತದಾನ ಮಾಡಿದ್ದಾನೆ. ಭಾವಚಿತ್ರವಿಲ್ಲದ 4 ಸಾವಿರ ಪ್ರಕರಣವನ್ನ ನೋಡಿದ್ದೇವೆ . ಒಂದು ಕೊಠಡಿಯ ಮನೆಯಲ್ಲಿ 80ಜನ ವಾಸವಿದ್ದಾರೆ . ಪರೀಕ್ಷೆ ಮಾಡಿದಾಗ ಆ ಮನೆಯಲ್ಲಿ ಯಾರು ಇರಲಿಲ್ಲ. ಅಲ್ಲಿಇದ್ದಿದ್ದು ಮಾತ್ರ ಬಿಜೆಪಿ ನಾಯಕ ಎದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ನಮಗೆ 15ರಿಂದ 16 ಸ್ತಾನ ಬರುವ ವಿಶ್ವಾಸವಿತ್ತು . ಆಂತರಿಕ ಸಮೀಕ್ಷೆ ಪ್ರಕಾರ ನಮಗೆ 15ರಿಂದ 16 ಸ್ಥಾನ  ಬರುತ್ತಿತ್ತು. ಆದರೆ ಚುನಾವಣೆಯಲ್ಲಿ ನಮಗೆ ಕೇವಲ 9 ಸ್ಥಾನ ಬಂದಿದೆ ಹೀಗಾಗಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪರಿಶೀಲನೆ ಮಾಡಿದ್ದೇವೆ.   ವಿಳಾಸವಲ್ಲದ 40 ಸಾವಿರ ಮತಗಳನ್ನ ಪತ್ತೆ ಹಚ್ಚಿದ್ದೇವೆ. ಐದು ವಿಧಗಳಲ್ಲಿ ಮತಗಳ್ಳತನವಾಗಿದೆ ಎಂದು ಆರೋಪಿಸಿದರು.

ಚುನಾವಣಾ ಆಯೋಗದ ವೆಬ್ ಸೈಟ್ ಬಂದ್

ಚುನಾವಣಾ ಆಯೋಗದ ವೆಬ್ ಸೈಟ್ ಬಂದ್ ಮಾಡಲಾಗಿದೆ . ಈ ಡೇಟಾ ಇಟ್ಟುಕೊಂಡು ಜನ ಪ್ರಶ್ನಿಸುತ್ತಾರೆಂದು ಬಂದ್  ಮಾಡಲಾಗಿದೆ.  ಮತಗಟ್ಟೆಗಳ ಫೂಟೇಜ್ ನೀಡಿದರೆ ಮತಗಳ್ಳತನ ಸಾಭೀತು ಆಗಲಿದೆ.   ಚುನಾವಣಾ ಆಯೋಗ ನನಗೆ ಪ್ರಮಾಣ ಪತ್ರ ನೀಡಲು ಹೇಳುತ್ತಿದೆ.  ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಮತಗಳ್ಳತನವಾಗಿದೆ.     ಒಬ್ಬ ವ್ಯಕ್ತಿ ಒಂದು ಮತ ಎಂಬ ಹಕ್ಕಿನ ವಿರುದ್ದ ಆಯೋಗ ನಡೆದುಕೊಂಡಿದೆ. ಎಲೆಕ್ಷನ್ ಕಮಿಷನ್ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ . ಸಂವಿಧಾನದ ಮೇಲೆ ದಾಳಿ ಮಾಡಿದ್ರೆ  ನಿಮ್ಮ ಮೇಲೆ ದಾಳಿ ಮಾಡೇ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದರು.

Key words: Voting, Bangalore, protest, Congress,  Rahul gandhi