ಫೆ.7ರ ಕಾಂಗ್ರೆಸ್ ಪ್ರತಿಭಟನೆ: ಇದು ಕೇವಲ ಚುನಾವಣಾ ಸ್ಟಂಟ್- ಆರ್.ಅಶೋಕ್ ಟೀಕೆ.

ಬೆಂಗಳೂರು,ಫೆಬ್ರವರಿ,3,2024(www.justkannada.in):  ರಾಜ್ಯಕ್ಕೆ ಅನುದಾನ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಫೆಬ್ರವರಿ 7ಕ್ಕೆ ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್ ವಿರುದ್ದ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಆರ್.ಅಶೋಕ್, ಫೆಬ್ರವರಿ 7ರ ಕಾಂಗ್ರೆಸ್ ಪ್ರತಿಭಟನೆ ಕೇವಲ ಚುನಾವಣೆಗಾಗಿ ನಡೆಸುತ್ತಿರುವ ಸ್ಟಂಟ್ ಎಂದು ಟೀಕಿಸಿದ್ದಾರೆ. 9 ವರ್ಷಗಳ ಕಾಲ ಸುಮ್ಮನಿದ್ದು ಈಗ ಮಾತನಾಡುತ್ತಾರೆ. ಕಾಂಗ್ರೆಸ್ ನಾಯಕರ ಪ್ರತಿಭಟನೆಗೆ ನಾಚಿಕೆಯಗಬೇಕು. ರಾಜ್ಯ ಸಭೆಯಲ್ಲಿ ವಿಪಕ್ಷ ನಾಯಕರು ಬಾಯಿ ಬಿಡಲಿಲ್ಲ. ಲೋಕಸಭೆಯಲ್ಲಿ ನಿಮ್ಮ ಸಂಸದರು ಮಾತನಾಡಿಲ್ಲ. ಈಗಾಗಲೇ 10 ಬಜೆಟ್ ಆಗಿದೆ.  ಈ ವೇಳೆ ಡಿ.ಕೆ.ಸುರೇಶ್ ಮಾತನಾಡಿದ್ರಾ?  ಎಂದು ಪ್ರಶ್ನಿಸಿದರು.

ರಾಜ್ಯಕ್ಕೆ ಅನುದಾನದ ಹಂಚಿಕೆಯಲ್ಲಿ ಯಾವುದೇ ತಾರತಮ್ಯವಾಗಿಲ್ಲ. ಬೇಕಿದ್ದರೇ ರಾಜ್ಯಕ್ಕೆ ಅನುದಾನದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ ಎಂದು ಆರ್.ಅಶೋಕ್ ಟಾಂಗ್ ನೀಡಿದರು.

Key words: Congress-protest – February 7-just – election stunt – R. Ashok