ಅತೃಪ್ತರನ್ನ ಸಮಧಾನಪಡಿಸಲು ಕಾಂಗ್ರೆಸ್ ಪ್ಲಾನ್: ಬಾಕಿ ಉಳಿದಿರುವ ನಿಗಮ ಮಂಡಳಿ ಸ್ಥಾನ ಭರ್ತಿಗೆ ಚಿಂತನೆ…

ಬೆಂಗಳೂರು,ಜೂ,18,2019(www.justkannada.in):  ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ  ತಮಗೆ ಸ್ಥಾನಮಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರನ್ನ ಸಮಾಧಾನ ಪಡಿಸಲು ಕಾಂಗ್ರೆಸ್ ಮುಂದಾಗಿದ್ದು  ಬಾಕಿ ಉಳಿದಿರುವ 32 ನಿಗಮಮಂಡಳಿ ಸ್ಥಾನಗಳನ್ನ ಭರ್ತಿ ಮಾಡಲು ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿಗಮಮಂಡಳಿ ಸ್ಥಾನ ಭರ್ತಿ ಮಾಡಲು ಕಾಂಗ್ರೆಸ್ ಮುಂದಾದರೇ ಮೊದಲು 10 ನಿಗಮಮಂಡಳಿಗೆ  ಆದ್ಯತೆ ನೀಡಲಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯ್ಕ್, ಮಹೇಶ್ ಕುಮುಟಳ್ಳಿ, ಎಸ್ ರಾಮಪ್ಪ ಸೇರಿ ಹಲವು ಶಾಸಕರಿಗೆ ನಿಗಮಮಂಡಳಿ ಸ್ಥಾನ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.

ಇನ್ನು ಶಾಸಕ ಭೀಮನಾಯ್ಕ್ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದು, ಈ ಸಂಬಂಧ ಸಿದ್ದರಾಮಯ್ಯಗೆ ಹೆಚ್.ಡಿ ರೇವಣ್ಣರನ್ನ ಮನವೊಲಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿತ್ತಿದೆ.  ನಿಗಮಮಂಡಳಿ ಭರ್ತಿ ಮೂಲಕ ಕಾಂಗ್ರೆಸ್ ಅತೃಪ್ತರನ್ನ ಸಮಾಧಾನಪಡಿಸಿ ಸಮ್ಮಿಶ್ರ ಸರ್ಕಾರ ಸುಭದ್ರಗೊಳಿಸಲು ಮುಂದಾಗಿದೆ.

Key words: Congress -plan -Thinking – filling – pending-corporation- board -seat.