ನಾವು ಪಕ್ಷಕ್ಕೆ ಬರ್ತೀವಿ ಅಂತ ಅರ್ಜಿ ಹಾಕಿಲ್ಲ- ಸಚಿವ ಕೆ.ಗೋಪಾಲಯ್ಯ

ಬೆಂಗಳೂರು,ಜನವರಿ,27,2022(www.justkannada.in): ವಲಸಿಗರು ಕಾಂಗ್ರೆಸ್ ಸೇರಿವ ವಿಚಾರ ವದಂತಿ.  ನಾವು ಪಕ್ಷಕ್ಕೆ ಬರ್ತೀವಿ ಅಂತ ಅರ್ಜಿ ಹಾಕಿಲ್ಲ ಎಂದು ಸಚಿವ ಕೆ.ಗೋಪಾಲಯ್ಯ ಟಾಂಗ್ ನೀಡಿದರು.

ವಲಸಿಗ ಸಚಿವರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂಬ ಸುದ್ಧಿ ಹರಡಿರುವ ಹಿನ್ನೆಲೆ ಈ ಕುರಿತು ಮಾತನಾಡಿದ ಸಚಿವ ಕೆ.ಗೋಪಾಲಯ್ಯ, ನನಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿದೆ ಸಚಿವನಾಗಿ ಮಾಡಿ 2 ಜಿಲ್ಲೆ ಉಸ್ತುವಾರಿ ನೀಡಿದದೆ. ನಮಗೆ ಇನ್ಣೇನು ಮಾಡಬೇಕು ನಮ್ಮಲ್ಲಿ ಯಾರೂ ಬೇರೆ ಪಕ್ಷಕ್ಕೆ ಹೋಗಲ್ಲ . ಬೇರೆ ಪಕ್ಷದಿಂದ ಬರುವವರ ಬಗ್ಗೆ ಗೊತ್ತಿಲ್ಲ. ಅದನ್ನ ರಮೇಶಣ್ನನನ್ನೇ ಕೇಳಿ ಎಂದರು.

ನಾವು ಅಲ್ಲಿಗೆ ಸಿದ್ಧರಾಮಯ್ಯ ಅಲ್ಲಿ ಇರಲ್ಲ- ಸಚಿವ ಮುನಿರತ್ನ ಲೇವಡಿ.

ಈ ಕುರಿತು ಮಾತನಾಡಿರುವ  ಸಚಿವ ಮುನಿರತ್ನ, ನ್ಯಾಯ ದೇಗುಲದಲ್ಲೇ ಸಿದ‍್ಧರಾಮಯ್ಯ ಹೇಳಿದ್ದಾರೆ. ಯಾರನ್ನೂ ವಾಪಸ್ ಪಕ್ಷಕ್ಕೆ ಬಿಟ್ಟಿಕೊಳ್ಳಲ್ಲ ಅಂತಾ. ನಾವು ಅಲ್ಲಿಗೆ ಹೋದ್ರೆ ಸಿದ್ಧರಾಮಯ್ಯ ಅಲ್ಲಿರಲ್ಲ ಎಂದು ಲೇವಡಿ ಮಾಡಿದರು.

ವಲಸಿಗ ಸಚಿವರು ನಾವ್ಯಾರು ಬೇರೆ ಯಾವ ಪಕ್ಷಕ್ಕ ಹೋಗಲ್ಲ. ಸಿದ್ಧರಾಮಯ್ಯ ಯಾರನ್ನ ಸಂಪರ್ಕಿಸಿದ್ದಾರೆ ಗೊತ್ತಿಲ್ಲ ಎಂದು ಸಚಿವ ಮುನಿರತ್ನ ತಿಳಿಸಿದರು.

Key words: congress-party-Minister -K. Gopalaiah

ENGLISH SUMMARY…

“We have not applied for a place in the party: ” Minister K. Gopalaiah
Bengaluru, January 27, 2022 (www.justkannada.in): Minister K. Gopalaiah today said that the migrants in the BJP are rejoining the Congress party is all just rumours. “We have not submitted applications to the Congress seeking a place,” he said.
Speaking in Bengaluru today, he informed that the BJP has given him everything. “The BJP has made me a minister and has given me the responsibility of two districts. What else do I want? Nobody among us are migrating. However, I also don’t know about people who are migrating to our party from other parties. Please ask Rameshanna,” he said.
Keywords: Minister K. Gopalaiah/ migrate/ Congress party/ rumours