ಕಾಂಗ್ರೆಸ್ ಪಾದಯಾತ್ರೆ: ನೀವು ನಿಮ್ಮ ಕೈಯಲ್ಲಾದಷ್ಟು ದಿನ ಈ ಹೋರಾಟದಲ್ಲಿ ಭಾಗಿಯಾಗಿ- ಡಿಕೆ ಶಿವಕುಮಾರ್ ಮನವಿ.

ಹಾಸನ,ಡಿಸೆಂಬರ್,25,2021(www.justkannada.in):  ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜನವರಿ 9 ರಿಂದ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಳ್ಳಲಿದ್ದು, ನೀವು ನಿಮ್ಮ ಕೈಯಲ್ಲಾದಷ್ಟು ದಿನ ಈ ಹೋರಾಟದಲ್ಲಿ ಭಾಗಿಯಾಗಿ ಎಂದು ಹಾಸನದಲ್ಲಿ ರಾಜ್ಯದ ಜನತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನವಿ ಮಾಡಿದರು.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್  ಹೇಳಿದ್ದಿಷ್ಟು. ಈ ಹೋರಾಟದಲ್ಲಿ ಎಲ್ಲ ಪಕ್ಷದವರು, ಕಲಾವಿದರು, ಕನ್ನಡ ಸಂಘಟನೆಗಳು, ರೈತ ಸಂಘಟನೆಗಳು, ಅನೇಕ ಸಂಘ, ಸಂಸ್ಥೆಗಳಿಗೆ ಆಹ್ವಾನ ನೀಡುತ್ತೇವೆ. ಗಾಂಧೀಜಿ ಅವರ ಹೋರಾಟದ ಹಾದಿಯಲ್ಲಿ ಕಾಂಗ್ರೆಸ್ ಈ ಹೋರಾಟ ಮಾಡುತ್ತಿದೆ. ನೀವು ನಿಮ್ಮ ಕೈಯಲ್ಲಾದಷ್ಟು ದಿನ ಈ ಹೋರಾಟದಲ್ಲಿ ಭಾಗಿಯಾಗಿ. ಮಾಡಲು ಇಚ್ಚಿಸುವವರು ತಮ್ಮ ಹೆಸರು ನೋಂದಣಿ ಮಾಡಿಸುವುದು ಉತ್ತಮ. ನೋಂದಣಿ ಮಾಡಿಸಿದರೆ ಅವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಿ ಅಥವಾ ಬ್ಲಾಕ್ ಕಾಂಗ್ರೆಸ್ ಸದಸ್ಯರ ಬಳಿ ನೋಂದಣಿ ಮಾಡಿಸಿ. ನಿತ್ಯ 15 ರಿಂದ 18 ಕಿ.ಮಿ. ದೂರ ಪಾದಯಾತ್ರೆ ನಡೆಯಲಿದೆ. ನಿಮ್ಮ ಜಲ, ನಿಮ್ಮ ಬದುಕಿಗಾಗಿ ಈ ಹೋರಾಟ ಮಾಡುತ್ತಿದ್ದು, ಹಾಸನದ ಜನರಿಗೆ ಆಹ್ವಾನ ನೀಡಲು ಇಲ್ಲಿಗೆ ಬಂದಿದ್ದೇನೆ. ನಂತರ ತುಮಕೂರು, ಚಾಮರಾಜನಗರ ಸೇರಿದಂತೆ ಇತರೆ ಜಿಲ್ಲೆಗಳ ಪ್ರವಾಸ ಮಾಡುತ್ತೇವೆ. ಈ ಮಧ್ಯೆ ಸರ್ಕಾರ ಕೇಂದ್ರದಿಂದ ಅನುಮತಿ ಪಡೆದರೆ ಸಂತೋಷ. ನಾವು ಅದನ್ನು ಸ್ವಾಗತಿಸುತ್ತೇವೆ ಎಂದರು.

ಎರಡು ಪ್ರಮುಖ ಅಂಶಗಳನ್ನು ಇಟ್ಟುಕೊಂಡು ಈ ಪ್ರವಾಸ ಬಂದಿದ್ದೇನೆ. ಕಾವೇರಿ ಜಲಾನಯನ ಪ್ರದೇಶದ ರೈತರ ರಕ್ಷಣೆ ಮುಖ್ಯ ಉದ್ದೇಶ. ಕಾವೇರಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಲಯ ತೀರ್ಪು ನೀಡಿದ್ದು, ಆಣೆಕಟ್ಟು ನಿಯಂತ್ರಣ ಕೇಂದ್ರದ ಪ್ರಾಧಿಕಾರದ ಕೈಯಲ್ಲಿದೆ. 177 ಟಿಎಂಸಿ ತಮಿಳುನಾಡಿಗೆ ಹೋಗಬೇಕಿದೆ. ಅದನ್ನು ಪ್ರಾಧಿಕಾರ ನೀಡಲಿದೆ. ನಮ್ಮ ರಾಜ್ಯ ಸಮತೋಲಿತ ಜಲ ಸಂರಕ್ಷಣಾ ಯೋಜನೆ ಮಾಡಬೇಕು ಎಂದು ಮುಂದಾಗಿದೆ. ನಾನು ನೀರಾವರಿ ಮಂತ್ರಿಯಾಗಿದ್ದಾಗ, ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರಕ್ಕೆ ಕಳುಹಿಸಿ ಸಮ್ಮತಿ ಪಡೆದಿದ್ದೆವು.

ಕುಡಿಯುವ ನೀರಿನ ಯೋಜನೆಗೆ ಯಾವುದೇ ಅನುಮತಿ ಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಮೇಕೆದಾಟು ಅಣೆಕಟ್ಟೆ ಕುಡಿಯುವ ನೀರಿನ ಯೋಜನೆಯಾಗಿದೆ. ಮೇಕೆದಾಟು ಯೋಜನೆಯಲ್ಲಿ ನಾವು ಕುಡಿಯುವ ನೀರು ಬಳಸಿಕೊಂಡು ತಮಿಳುನಾಡಿಗೂ ಅಗತ್ಯ ಬಿದ್ದಾಗ ನೀಡಬಹುದು. ಈಗ ಈ ಯೋಜನೆಗೆ ಕೇವಲ ಪರಿಸರ ಇಲಾಖೆ ಅನುಮತಿ ಮಾತ್ರ ಬಾಕಿ ಇದೆ.CM BS yeddyurappa- never got - this level-KPCC President -DK Shivakumar -criticizes ...

ಈ ಹೋರಾಟದಲ್ಲಿ ಎಲ್ಲ ಪಕ್ಷದವರು, ಕಲಾವಿದರು, ಕನ್ನಡ ಸಂಘಟನೆಗಳು, ರೈತ ಸಂಘಟನೆಗಳು, ಅನೇಕ ಸಂಘ, ಸಂಸ್ಥೆಗಳಿಗೆ ಆಹ್ವಾನ ನೀಡುತ್ತೇವೆ. ಗಾಂಧೀಜಿ ಅವರ ಹೋರಾಟದ ಹಾದಿಯಲ್ಲಿ ಕಾಂಗ್ರೆಸ್ ಈ ಹೋರಾಟ ಮಾಡುತ್ತಿದೆ. ನೀವು ನಿಮ್ಮ ಕೈಯಲ್ಲಾದಷ್ಟು ದಿನ ಈ ಹೋರಾಟದಲ್ಲಿ ಭಾಗಿಯಾಗಿ. ಮಾಡಲು ಇಚ್ಚಿಸುವವರು ತಮ್ಮ ಹೆಸರು ನೋಂದಣಿ ಮಾಡಿಸುವುದು ಉತ್ತಮ. ನೋಂದಣಿ ಮಾಡಿಸಿದರೆ ಅವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಿ ಅಥವಾ ಬ್ಲಾಕ್ ಕಾಂಗ್ರೆಸ್ ಸದಸ್ಯರ ಬಳಿ ನೋಂದಣಿ ಮಾಡಿಸಿ. ನಿತ್ಯ 15 ರಿಂದ 18 ಕಿ.ಮಿ. ದೂರ ಪಾದಯಾತ್ರೆ ನಡೆಯಲಿದೆ. ನಿಮ್ಮ ಜಲ, ನಿಮ್ಮ ಬದುಕಿಗಾಗಿ ಈ ಹೋರಾಟ ಮಾಡುತ್ತಿದ್ದು, ಹಾಸನದ ಜನರಿಗೆ ಆಹ್ವಾನ ನೀಡಲು ಇಲ್ಲಿಗೆ ಬಂದಿದ್ದೇನೆ. ನಂತರ ತುಮಕೂರು, ಚಾಮರಾಜನಗರ ಸೇರಿದಂತೆ ಇತರೆ ಜಿಲ್ಲೆಗಳ ಪ್ರವಾಸ ಮಾಡುತ್ತೇವೆ. ಈ ಮಧ್ಯೆ ಸರ್ಕಾರ ಕೇಂದ್ರದಿಂದ ಅನುಮತಿ ಪಡೆದರೆ ಸಂತೋಷ. ನಾವು ಅದನ್ನು ಸ್ವಾಗತಿಸುತ್ತೇವೆ.

ಈ ಯೋಜನೆ ಕರ್ನಾಟಕದ್ದು, ಇದಕ್ಕೆ ತಮಿಳುನಾಡಿನ ಒಂದು ಇಂಚು ಭೂಮಿ, ಒಂದು ರೂ. ಹಣ ಬೇಕಾಗಿಲ್ಲ.  ನಮ್ಮ ನೀರು, ನಮ್ಮ ಹಕ್ಕು, ನಮ್ಮ ಯೋಜನೆ. ಆದರೆ ಅವರಿಗೆ ಸೇರಬೇಕಾದ ನೀರಿಗೆ ತೊಂದರೆ ಆಗುವುದಿಲ್ಲ. 400 ಮೆ.ವ್ಯಾ. ವಿದ್ಯುತ್ ಉತ್ಪಾದನೆ, ಕುಡಿಯುವ ನೀರು, ಕಾವೇರಿ ಜಲಾನಯನ ಪ್ರದೇಶಕ್ಕೆ ಕಷ್ಟ ಕಾಲದಲ್ಲಿ ನ್ಯಾಯ ಒದಗಿಸಲು ಈ ಯೋಜನೆ ಮಾಡಲೇಬೇಕು. ಈ ಯೋಜನೆಗೆ ಇರುವ ಸಮಸ್ಯೆ ಬಗೆಹರಿಸಲು ಒಂದೇ ದಿನ ಸಾಕು. ಆದರೂ ರಾಜ್ಯ ಸರ್ಕಾರ ಇದುವರೆಗೂ ಈ ವಿಚಾರವಾಗಿ ಕೇಂದ್ರದ ಜತೆ ಸಭೆ ಮಾಡಿಲ್ಲ. ಹೀಗಾಗಿ ಬರುವ ಜನವರಿ 9 ಮೇಕೆದಾಟಿನಿಂದ ಬೆಂಗಳೂರುವರೆಗೂ ಜನರಲ್ಲಿ ಜಾಗೃತಿ ಮೂಡಿಸಲು 10 ದಿನಗಳ ಕಾಲ ಪಾದಯಾತ್ರೆ ನಡೆಸುತ್ತಿದ್ದೇವೆ. ಇದು ಪಕ್ಷಾತೀತ ಹೋರಾಟವಾಗಿದೆ.

ಇನ್ನು ಎರಡನೇ ಅಂಶ ನಮ್ಮ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ. ಈಗಾಗಲೇ ಅದನ್ನು ಆರಂಭಿಸಿದ್ದೇವೆ. ಇದು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ನಡೆಯಲಿದೆ. 14 ವರ್ಷಗಳ ನಂತರ ಈ ಅಭಿಯಾನ ನಡೆಯುತ್ತಿದೆ. ಒಂದು ಕ್ಷೇತ್ರದಿಂದ ಕನಿಷ್ಠ 25 ಸಾವಿರ ಸದಸ್ಯತ್ವ ಮಾಡಿಸಲು ಸೂಚಿಸಿದ್ದೇವೆ.

ಮೇಕೆದಾಟು ಹೋರಾಟ ನಮ್ಮದು, ಇದನ್ನು ಶಿವಕುಮಾರ್ ಅವರು ಹೈಜಾಕ್ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತ ಪ್ರಶ್ನೆಗೆ, ‘ಕುಮಾರಸ್ವಾಮಿ ಅವರು ದೊಡ್ಡವರು. ಅವರು ಯಾವಾಗ ಎಲ್ಲೆಲ್ಲಿ ಹೋರಾಟ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ತೀರ್ಮಾನಿಸಿ ಮುಂದಾಳತ್ವ ವಹಿಸಿ, ಪಕ್ಷಾತೀತವಾಗಿ ಹೋರಾಟ ಮಾಡುತ್ತಿದೆ. ಕುಮಾರಸ್ವಾಮಿ ಅವರು ಸದನದಲ್ಲಿ ನಾನು ಈ ಹೋರಾಟ ಮಾಡಬೇಕು ಎಂದು ಭಾವಿಸಿದ್ದೆ, ಈ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಈ ಹೋರಾಟಕ್ಕೆ ಅವರಿಂದ ಯಾವುದೇ ತಕರಾರು ಇಲ್ಲ’ ಎಂದರು.

ಸರ್ಕಾರ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ತರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾವು ಹೇಳಬೇಕಾಗಿದ್ದನ್ನು, ಚರ್ಚೆ ಮಾಡಬೇಕಾಗಿದ್ದನ್ನು ಮಾಡಿದ್ದೇವೆ. ಅವರು ರಾಜಕೀಯ ಉದ್ದೇಶದಿಂದ ಇದನ್ನು ತರುತ್ತಿದ್ದಾರೆ. ಜ. 5 ರ ನಂತರ ಮೇಲ್ಮನೆಯಲ್ಲಿ ತಮಗೆ ಬಹುಮತ ಬರಲಿದೆ ಎಂದು ಇದನ್ನು ಮುಂದಕ್ಕೆ ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ನಿಲುವು ಈಗಾಗಲೇ ಹೇಳಿದ್ದೇವೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ’ ಎಂದರು.

Key words: Congress padayatre-kpcc-president-  DK Sivakumar- appeals.