ಕಾಂಗ್ರೆಸ್ ನದ್ದು ಗ್ಯಾರಂಟಿ ಕಾರ್ಡ್ ಅಲ್ಲ, ಅದು ಬೋಗಸ್ ಕಾರ್ಡ್- ಸಿಎಂ ಬೊಮ್ಮಾಯಿ ಟೀಕೆ.

ಮಡಿಕೇರಿ, ಮಾರ್ಚ್,18,2023(www.justkannada.in): ಜನರಿಗೆ ಕಾಂಗ್ರೆಸ್  ನೀಡುತ್ತಿರುವುದು  ಗ್ಯಾರಂಟಿ ಕಾರ್ಡ್ ಅಲ್ಲ, ಅದು ಬೋಗಸ್ ಕಾರ್ಡ್ ಎಂದು  ಸಿಎಂ ಬಸವರಾಜ  ಬೊಮ್ಮಾಯಿ ಟೀಕಿಸಿದರು.

ಮಡಿಕೇರಿಯಲ್ಲಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಶಾಲೆಗೆ ತೆರಳುವ ಹೆಣ್ಣುಮಕ್ಕಳಿಗಾಗಿ ಉಚಿತ ಬಸ್ ಪಾಸ್ ಒದಗಿಸಲಾಗುತ್ತಿದೆ. 8 ಲಕ್ಷ ವಿದ್ಯಾರ್ಥಿನಿಯರಿಗೆ ಇದರಿಂದ‌ ಲಾಭವಾಗಿದೆ. ಸಾಮಾಜಿಕ‌ ನ್ಯಾಯ ಹೆಚ್ಚಿಸಲು ಕ್ರಮ‌ಕೈಗೊಳ್ಳಲಾಗಿದೆ. ಹಾಗಾಗಿ ಜೇನು ಗೂಡಿಗೆ ಕೈ ಹಾಕುವ ಕೆಲಸ‌ಮಾಡಿದ್ದೇನೆ. ಬರೇ ಭಾಷಣದಲ್ಲಿ ಸಾಮಾಜಿಕ‌ನ್ಯಾಯ ಸಾಧ್ಯವಿಲ್ಲ. ಕೆಲವರನ್ನ ಕೆಲವು ಸಮಯ ಮೋಸ ಮಾಡಬಹುದು.‌ ಆದರೆ ಜನರನ್ನ ಎಲ್ಲಾ‌ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್​ಗೆ ಅಧಿಕಾರವಿದ್ದಾಗ ಯಾಕೆ ಸೌಲಭ್ಯ ನೀಡಲಿಲ್ಲ. ಅದು ಗ್ಯಾರಂಟಿ ಕಾರ್ಡ್ ಅಲ್ಲ, ಅದು ಬೋಗಸ್ ಕಾರ್ಡ್ ಎಂದು ಲೇವಡಿ ಮಾಡಿದರು.

ಮಾಜಿ ಸಿಎಂ ಯಡಿಯೂರಪ್ಪ ಅವರು ನಿಜವಾದ ಸಾಮಾಜಿಕ ನ್ಯಾಯ ಕೊಟ್ಟವರಾಗಿದ್ದಾರೆ. ಭಾಗ್ಯ ಲಕ್ಷ್ಮೀ ಯೋಜನೆ, ಕಾಗಿನೆಲೆ ಅಭಿವೃದ್ಧಿ, ತಾಂಡಾ ಅಭಿವೃದ್ಧಿ ನಿಗಮ ಹಾಗೂ ಬೋವಿ ಅಭಿವೃದ್ಧಿ ನಿಗಮ ಮಾಡಿದ್ದು ಯಡಿಯೂರಪ್ಪನವರು ಎಂದು ಸಿಎಂ ಬೊಮ್ಮಾಯಿ ಯಡಿಯೂರಪ್ಪ ಅವರ ಸಾಧನೆಗಳನ್ನು  ಗುಣಗಾನ ಮಾಡಿದರು.

Key words: Congress – not -guarantee card-  bogus card- CM-Basavaraj Bommai