ಚರ್ಚಿಸಲು ಬೇರೆ ವಿಷಯ ಇಲ್ಲದೇ ಕಾಂಗ್ರೆಸ್ ನಿಂದ ಕಾಲಹರಣ: ಸಿಡಿ ವಿಚಾರ ಪ್ರಸ್ತಾಪಕ್ಕೆ ಸಿಎಂ ಬಿಎಸ್ ವೈ ಕಿಡಿ…

ಬೆಂಗಳೂರು,ಮಾರ್ಚ್,23,2021(www.justkannada.in): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿಚಾರ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ವಿರುದ್ದ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.jk

ಈ ಕುರಿತು ಇಂದು ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ನೈತಿಕ ಹೊಣೆ ಹೊತ್ತು ಅವರು ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಎಸ್ ಐಟಿ ತನಿಖೆ ನಡೆಯುತ್ತಿದೆ. ಸಿಡಿಯಲ್ಲಿರುವ ಯುವತಿ ಎಸ್ ಐಟಿ ಕೈಗೆ ಸಿಗುತ್ತಿಲ್ಲ. ತನಿಖೆ ನಡೆಯುತ್ತಿದೆ ಎಂದು ಹೇಳಿದರೂ ಕಾಂಗ್ರೆಸ್ ಗೆ ಚರ್ಚಿಸಲು ವಿಷಯ ಇಲ್ಲದೆ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.Congress -no other- issue – discuss-CD case- CM BS yeddyurappa

ವಿಪಕ್ಷದವರು ಏಕೆ ಹೀಗೆ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ.  ಕಾಂಗ್ರೆಸ್ ನವರು ಸಮಯ ಹಾಳು ಮಾಡೋದು ಸರಿಯಲ್ಲ. ದಯವಿಟ್ಟು ಧರಣಿ ಕೈಬಿಟ್ಟು ಕಲಾಪ ನಡೆಯಲು ಅವಕಾಶ ಮಾಡಿಕೊಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದರು.

Key words: Congress -no other- issue – discuss-CD case- CM BS yeddyurappa