Sunday, September 20, 2026

BDA Apartments

Home Front Page ಬಿಜೆಪಿಯಲ್ಲಿ ಶೀಘ್ರದಲ್ಲೇ ಭಿನ್ನಮತ ಶಮನ: ಕಾಂಗ್ರೆಸ್ ಗೆ 60ರಿಂದ 65 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇಲ್ಲ- ಸಿಎಂ...

ಬಿಜೆಪಿಯಲ್ಲಿ ಶೀಘ್ರದಲ್ಲೇ ಭಿನ್ನಮತ ಶಮನ: ಕಾಂಗ್ರೆಸ್ ಗೆ 60ರಿಂದ 65 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇಲ್ಲ- ಸಿಎಂ ಬೊಮ್ಮಾಯಿ ಟೀಕೆ.

ಮಂಗಳೂರು,ಏಪ್ರಿಲ್,13,2023(www.justkannada.in): ಪಕ್ಷದಲ್ಲಿ ಉಂಟಾಗಿರುವ ಭಿನ್ನಮತವನ್ನ ಶೀಘ್ರವೇ ಬಗೆಹರಿಸಲಾಗುತ್ತದೆ. ಅಸಮಾಧಾನಿತರನ್ನ ಕರೆದು ಹೈಕಮಾಂಡ್ ಮಾತನಾಡುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ನಾನು ಎಲ್ಲ ನಾಯಕರ ಜತೆ ಮಾತನಾಡಿದ್ದೇನೆ. ಅಸಮಾಧಾನಿತರ ಜತೆ ಹೈಕಮಾಂಡ್ ಮಾತನಾಡುತ್ತಿದೆ.  ಶೀಘ್ರವೇ ಭಿನ್ನಮತ ಶಮನವಾಗಲಿದೆ. ಬಿಜೆಪಿ 2ನೇ ಪಟ್ಟಿ ಬಿಡುಗಡೆಯಾಗಿದೆ.  ಇನ್ನು 12 ಕ್ಷೇತ್ರಗಳು ಬಾಕಿ ಇದೆ.  ಕೆಲವೆಡೆ ಆಕಾಂಕ್ಷಿಗಳು ಎಂಎಲ್ ಸಿಗಳು ರಾಜೀನಾಮೆ ನೀಡಿದ್ದಾರೆ. ಉಳಿದ ಕ್ಷೇತ್ರಗಳಲ್ಲೂ ಅಚ್ಚರಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದರು.ಬಿಜೆಪಿಯಲ್ಲಿ ಶೀಘ್ರದಲ್ಲೇ ಭಿನ್ನಮತ ಶಮನ cm bommai cm bommai 5

ಕಾಂಗ್ರೆಸ್ ನವರಿಗೆ 60 ರಿಂಧ 65 ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಇಲ್ಲ. ಈಗ ಅಮದು ಮಾಡಿಕೊಳ್ಳುವ ಲೆಕ್ಕಚಾರದಲ್ಲಿದ್ದಾರೆ. ಕಾಂಗ್ರೆಸ್ ಗೆ ಸಮರ್ಥ ಅಭ್ಯರ್ಥಿಗಳು ಇಲ್ಲ. ಅವರು ಅಧಿಕಾರಕ್ಕೆ ಬರಲ್ಲ. ರಾಜಕಾರಣದಲ್ಲಿ ಪಕ್ಷ ಬದಲಿಸೋದು ಸಾಮಾನ್ಯ ಆಗ್ತಾ ಇರುತ್ತದೆ. ಅಸಮಾಧಾನಗೊಂಡಿರುವವರ ಮನವೊಲಿಕೆ ಮಾಡುತ್ತೇವೆ ಎಂದರು.

Key words: Congress – no candidates – 60 to 65 constituencies- CM Bommai