ಕಾಂಗ್ರೆಸ್ ಎಂಎಲ್ ಸಿ ಟಿಕೆಟ್ ಪಡೆಯಲು 15 ಕೋಟಿ ರೂ. ಹಣ ಇರಬೇಕು- ಹೊಸಬಾಂಬ್ ಸಿಡಿಸಿದ ಎಂಎಲ್ ಸಿ ಹೆಚ್.ವಿಶ್ವನಾಥ್.

ಮೈಸೂರು,ನವೆಂಬರ್,17,2021(www.justkannada.in):  ರಾಜ್ಯ ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದ್ದು ಮೂರು ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಈ ಮಧ್ಯೆ ಕಾಂಗ್ರೆಸ್ ಎಂಎಲ್ ಸಿ ಟಿಕೆಟ್ ಪಡೆಯಲು 15 ಕೋಟಿ ರೂ. ಇರಬೇಕು ಎಂದು ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಹೊಸಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಕಾಂಗ್ರೆಸ್ ಎಂಎಲ್ ಸಿ ಟಿಕೆಟ್ ಪಡೆಯಲು 15 ಕೋಟಿ ಬೇಕು.  ಎಂಎಲ್ ಸಿ ಟಿಕೆಟ್ ಕೇಳಿದವರಿಗೆ ಡಿಕೆ ಶಿವಕುಮಾರ್ ಹೇಳಿದ್ದಾರೆ. 15 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು  ಎಂದಿದ್ದಾರೆ. ಜೊತೆಗೆ 1 ಲಕ್ಷ ರೂಪಾಯಿ 1 ಲಕ್ಷ ರೂ. ನಾನ್ ರಿಟರ್ನೇಬಲ್ ಫಂಡ್ ನೀಡಬೇಕು ಎಂದು ತಿಳಿಸಿದ್ದಾರೆ.

ಹೀಗಾದರೇ ಸಾಮಾಜಿಕ ನ್ಯಾಯ ಎಲ್ಲಿ ಸಿಗುತ್ತೆ ಹೇಳಿ.  ಕಾಂಗ್ರೆಸ್ ನಲ್ಲೂ ಸಾಮಾಜಿಕ ನ್ಯಾಯ ದೂರವಾಗುತ್ತಿದೆ ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು.

Key words: Congress –MLC- ticket –need-15 crore- money-MLC H. Vishwanath- new bomb- blast.

ENGLISH SUMMARY…

“You should have Rs.15 cr. to get a Cong. ticket to contest it the MLC elections: MLC H. Vishwanath explodes new bomb
Mysuru, November17, 2021 (www.justkannada.in): As the date of the MLC elections is nearing, the competition to get the ticket has gained heat in all three major national parties. In the meantime, BJP MLC H. Vishwanath has exploded a new bomb by stating that an aspirant who wishes to contest the election from Congress ticket should have Rs. 15 crores!
Speaking in Mysuru today, he informed that KPCC President D.K. Shivakumar has told that the candidate who wishes to get the ticket from the Congress party should have at least Rs. 15 crore bank balance. “Along with this, they should also provide Rs. 1 lakh non-returnable fund,” he added.
“How will we get social justice if the condition is like this. Social justice is disappearing even in Congress party now,” he said.
Keywords: MLC election/ H. Vishwanath/ Rs.15 crore to contest/Congress ticket