ಕಾಂಗ್ರೆಸ್ ನ 40ಕ್ಕೂ ಅಧಿಕ ಶಾಸಕರು ರಾಜೀನಾಮೆಗೆ ಚಿಂತನೆ- ಸಂಸದ ಗೋವಿಂದ ಕಾರಜೋಳ

ಬೆಂಗಳೂರು,ಜೂನ್,17,2024 (www.justkannada.in): ರಾಜ್ಯದಲ್ಲಿ ಒಂದು ಅಭಿವೃದ್ದಿ ಕೆಲಸ ಆಗಲಿಲ್ಲ. ಹೀಗಾಗಿ ಕಾಂಗ್ರೆಸ್ ನ 40ಕ್ಕೂ ಅಧಿಕ ಶಾಸಕರು ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ  ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ರಾಜ್ಯದಲ್ಲಿ ಒಂದು ಅಭಿವೃದ್ದಿ ಕೆಲಸ ಆಗಲಿಲ್ಲ. ಬಿಜೆಪಿ ಅವಧಿಯಲ್ಲಾದ ಕಾಮಗಾರಿಗಳ ಕೆಲಸ ನಿಂತಿವೆ. 40ಕ್ಕೂ ಅಧಿಕ ಶಾಸಕರು ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ ಎಂದರು.

ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿ  ಸರ್ಕಾರ ದಿವಾಳಿಯಾಗಿದೆ.  ರಾಜ್ಯದ ಸಚಿವರು ನಿಷ್ಕ್ರಿಯವಾಗಿದ್ದಾರೆ. ಶಾಸಕರು ಸರ್ಕಾರದ ವಿರುದ್ದವೇ ತಿರುಗಿಬಿದ್ದಿದ್ದಾರೆ ಎಂದು ಗೋವಿಂದ ಕಾರಜೋಳ ಹೇಳಿದರು.

Key words: Congress, MLAs, resignation, MP Govinda Karajola