ಕಾಂಗ್ರೆಸ್ ಶಾಸಕರು ಡಿ‌.ಕೆ ಸುರೇಶ್ ಹೇಳಿಕೆ ಬೆಂಬಲಿಸಲು ದೆಹಲಿಗೆ ಹೋಗಿದ್ದಾರೆ-ಆರ್.ಅಶೋಕ್.

ಬೆಂಗಳೂರು, ಫೆಬ್ರವರಿ 7,2024(www.justkannada.in):  ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ವ್ಯಂಗ್ಯವಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ಶಾಸಕರು ಡಿ‌.ಕೆ ಸುರೇಶ್ ಹೇಳಿಕೆ ಬೆಂಬಲಿಸಲು ದೆಹಲಿಗೆ ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ವಿಧಾನಸೌಧ ಆವರಣದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ ವೇಳೆ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್  ಪಕ್ಷದ ಡಿಎನ್​ಎಯಲ್ಲೇ ಜಿನ್ನಾ ಸಂಸ್ಕೃತಿ ಅಂಟಿಕೊಂಡಿದೆ. ಮಾನ ಮರ್ಯಾದೆ ಇರುವ ಪಕ್ಷ ದೇಶ ವಿಭಜನೆಯ ಮಾತು ಯಾವತ್ತೂ ಆಡಿರಲಿಲ್ಲ. ಕಾಂಗ್ರೆಸ್ ನವರಿಗೆ ನಾಚಿಕೆ ಆಗಲ್ವಾ, ಮಾನ ಮರ್ಯಾದೆ ಇದ್ಯಾ? ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​​ ನ ಗುರಿ ಪ್ರಧಾನಿ ನರೇಂದ್ರ ಮೋದಿ. ಅವರು ಹತ್ತು ವರ್ಷ ಏನು ಬಿಡುಗಡೆ ಮಾಡಿದ್ದಾರೆ, ನೀವೇನು ಬಿಡುಗಡೆ ಮಾಡಿದ್ದೀರಿ ದಾಖಲೆ‌ ಮುಂದಿಡಿ ಎಂದು  ಸವಾಲು ಹಾಕಿದ ಆರ್.ಅಶೋಕ್, ಬರಕ್ಕೆ ಹಣ ಬಿಡುಗಡೆ ಮಾಡಲು ಕಾಂಗ್ರೆಸ್ ಸರ್ಕಾರ 9 ತಿಂಗಳು ತೆಗೆದುಕೊಂಡಿದೆ. ಅದಕ್ಕೆ ದಾಖಲೆ ನನ್ನ ಹತ್ತಿರ ಇದೆ.  ಕ್ಯಾಬಿನೆಟ್ ದರ್ಜೆ ಕೊಡಲು ನಿಮಗೆ ದುಡ್ಡು ಇದೆ. ಅದಕ್ಕೆ ನಿಮಗೆ ಮೋದಿ ದುಡ್ಡು ಕೊಡುತ್ತಾರಾ? ಕೇಂದ್ರ ಸರ್ಕಾರ ವಿರುದ್ಧ ಆರೋಪ ಮಾಡುವ ಸಿದ್ದರಾಮಯ್ಯ 15 ನೇ ಹಣಕಾಸು ಆಯೋಗದಲ್ಲಿ ಹೋಗಿ ಕೂತಿದ್ರಲ್ಲಾ ಆಗ ಯಾಕೆ ಬಾಯಿ ಬಿಡಲಿಲ್ಲ? ಲೋಕಸಭೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸೈಲೆಂಟ್, ಆಚೆ ಬಂದು ವೈಲೆಂಟ್. ಸಿದ್ದರಾಮಯ್ಯಗೆ ಎಂಟು ತಿಂಗಳಿಂದ ಮರೆವು ಕಾಯಿಲೆ ಇದೆ ಎಂದು ಆರ್.ಅಶೋಕ್ ಲೇವಡಿ ಮಾಡಿದರು.

Key words: Congress- MLAs – Delhi -support DK Suresh’s- statement – R. Ashok.