ತಮಗೆ ಡಿಸಿಎಂ ಹುದ್ದೆ ಆಫರ್ ಕುರಿತು ಶಾಸಕ ರಾಮಲಿಂಗರೆಡ್ಡಿ ಪ್ರತಿಕ್ರಿಯಿಸಿದ್ದು ಹೀಗೆ…?

ಬೆಂಗಳೂರು,ಜು,20,2019(www.justkannada.in):  ನನಗೆ ಯಾವುದೇ ಡಿಸಿಎಂ ಹುದ್ದೆಯ ಆರೋಪ ಬಂದಿರಲಿಲ್ಲ. ಡಿಸಿಎಂ ಹುದ್ದೆ ಆಫರ್ ನೀಡಿರುವುದು ಊಹಾಪೂಹ. . ನನಗೆ ಡಿಸಿಎಂ ಹುದ್ದೆ ಬೇಡ. ಆಸೆಯೂ ಇಲ್ಲ ಎಂದು ಕಾಂಗ್ರೆಸ್ ಶಾಸಕ ರಾಮಲಿಂಗರೆಡ್ಡಿ ತಿಳಿಸಿದರು.

ಇಂದು ಪದ್ಮನಾಭ ನಗರದಲ್ಲಿರುವ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ರಾಮಲಿಂಗರೆಡ್ಡಿ ಅವರು ಹೆಚ್.ಡಿ ದೇವೇಗೌಡರ ಜತೆ ಚರ್ಚೆ ನಡೆಸಿದರು. ಚರ್ಚೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅತೃಪ್ತರ ಮನವೊಲಿಕೆ ಸಂಬಂಧ ಚರ್ಚೆಯಾಗಿಲ್ಲ. ದೇವೇಗೌಡರ ನಿವಾಸದಲ್ಲಿ ಚರ್ಚೆಯಾಗಿಲ್ಲ.  ಅತೃಪ್ತರು ಯಾರೂ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಭಾನುವಾರ ಎಸ್ ಟಿ ಸೋಮಶೇಖರ್ ಜತೆ ಮಾತನಾಡಿದ್ದೆ. ಆ ನಂತರ ನನ್ನ ಸಂಪರ್ಕಕ್ಕೆ ಯಾರೂ ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದರು.

ನನಗೆ ಡಿಸಿಎಂ ಹುದ್ದೆ ಆಫರ್ ನೀಡಿರುವುದು ಊಹಾಪೂಹ.  ನಾವೆಲ್ಲರೂ ಒಟ್ಟಾಗಿಯೇ ಹೋಗಿ ರಾಜೀನಾಮೆ ನೀಡಿದ್ದವು. ಆದರೆ ನಾನು ರಾಜೀನಾಮೆ ವಾಪಸ್ ಪಡೆದಿದ್ದೇನೆ ಎಂದು ರಾಮಲಿಂಗರೆಡ್ಡಿ ತಿಳಿಸಿದರು.

Key words: congress MLA- Ramalingareddy-reaction- offer- DCM