ಕಾಂಗ್ರೆಸ್ ನಾಯಕರೇ ಪರಸ್ಪರ ಶಾಸಕರ ಖರೀದಿಗೆ ಮುಂದಾಗಿರುವುದು ಜನರಿಗೆ ದ್ರೋಹ ಬಗೆದಂತೆ- ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ,ನವೆಂಬರ್,22,2025 (www.justkannada.in):  ಅಧಿಕಾರ ಹಂಚಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರೇ ಪರಸ್ಪರ ಶಾಸಕರ ಖರೀದಿಗೆ ಮುಂದಾಗಿದ್ದಾರೆ. ಇದು ಬಹುಮತ ಕೊಟ್ಟ ಜನರಿಗೆ ದ್ರೋಹ ಬಗೆದಂತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,   ಡಿಕೆ ಶಿವಕುಮಾರ್ ಶಾಸಕರ ಖರೀದಿಗೆ ಮುಂದಾಗಿದ್ದಾರೆ  ಜೈಲಿಗೆ ಹೋಗಿ ನನ್ನ ಪರ ಬನ್ನಿ ಎಂದಿದ್ದಾರೆ  ಶಾಸಕರು ಬಂದ್ರೆ ನಮ್ಮ ಕಡೆ ಇರಲಿ ಅಂತಾ ಪ್ಲಾನ್. ವೋಟಿಂಗ್ ಬಂದರೆ ಬೆಂಬಲ ಇರಲಿ ಅಂತಾ ಡಿಕೆ ಶಿವಕುಮಾರ್ ಜೈಲಿಗೆ ಭೇಟಿ ಕೊಟ್ಟು ಶಾಸಕರಿಗೆ ಮನವಿ ಮಾಡಿದ್ದಾರೆ. ಈ ಮೂಲಕ ವೋಟಿಂಗ್ ನಲ್ಲಿ ತಮ್ಮ ನಂಬರ್ ಜೋಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪೊಲೀಸ್ ಇಲಾಖೆಯಲ್ಲಿ  ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ.  ಚೀಟಿ ನೀಡಿ ವರ್ಗಾವಣೆ ಮಾಡಿಸುತ್ತಿದ್ದಾರೆ.  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಪ್ರಚಂಡ ಬಹುಮತ ಕೊಟ್ಟ ಜನರಿಗೆ ಕಾಂಗ್ರೆಸ್ ದ್ರೋಹ ಬಗೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದರು.

Key words: Congress leaders, buy, MLAs, Prahlad Joshi