ಕಾಂಗ್ರೆಸ್ ಮುಖಂಡ ಮುದ್ಧಹನುಮೇಗೌಡ ಬಿಜೆಪಿ ಸೇರುವುದು ಖಚಿತ: ಮಾಜಿ ಸಿಎಂ ಬಿಎಸ್ ವೈ ಮಾಹಿತಿ.

ಬೆಂಗಳೂರು,ಸೆಪ್ಟಂಬರ್,3,2022(www.justkannada.in): ರಾಜ್ಯಸಭೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಬಿಡುವುದಾಗಿ ಹೇಳಿದ್ಧ ಕಾಂಗ್ರೆಸ್ ಮುಖಂಡ  ಮುದ್ಧಹನುಮೇಗೌಡ ಇದೀಗ ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗಿದೆ.

ಈ ಕುರಿತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಮುದ್ಧಹನುಮೇಗೌಡ ಬಿಜೆಪಿ ಸೇರ್ತಾರೆ. ಈಗಾಗಲೇ ಮುದ್ದಹನುಮೇಗೌಡ ಮಾತಾಡಿದ್ದಾರೆ. ಬಿಜೆಪಿ ಸೇರುವುದಾಗಿ ಹೇಳಿದ್ದಾರೆ. ಇನ್ನಷ್ಟು ಮುಖಂಡರು ಬಿಜೆಪಿ ಸೇರುತ್ತಾರೆ ಎಂದು ಬಿಎಸ್ ವೈ ತಿಳಿಸಿದ್ದಾರೆ.

ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಮೋದಿ ಭೇಟಿ ಬಳಿಕ ಮತ್ತಷ್ಟು ಶಕ್ತಿ ಬಂದಿದೆ. ಶಿವಮೊಗ್ಗಕ್ಕೆ  ಮೋದಿ ಅವರನ್ನ ಕರೆಸುಯವ ಚಿಂತನೆ ಇದೆ. ಮೋದಿ ಕರೆಸಿ 1 ಲಕ್ಷ ಜನರನ್ನ ಸೇರಿಸುತ್ತೇವೆ ಎಂದು ಬಿಎಸ್ ವೈ ತಿಳಿಸಿದರು.

Key words: Congress leader- Muddha Hanumegowda – join –BJP-BS yeddyurappa