ನಮ್ಮನ್ನ ಜೈಲಿಗೆ ಹಾಕಿದ್ರೂ ಪರವಾಗಿಲ್ಲ: ಪಾದಯಾತ್ರೆ ಮಾಡೇ ಮಾಡುತ್ತೇವೆ- ಡಿ.ಕೆ ಶಿವಕುಮಾರ್.

ಬೆಂಗಳೂರು,ಜನವರಿ,6,2022(www.justkannada.in):  ನಮ್ಮನ್ನ ಜೈಲಿಗೆ ಹಾಕಿದರೂ ಪರವಾಗಿಲ್ಲ ನಾವು ಪಾದಯಾತ್ರೆ ಮಾಡೇ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್,  ನನ್ನನ್ನ ಅರೆಸ್ಟ್ ಮಾಡಲಿ ಸಿದ್ದರಾಮಯ್ಯರನ್ನ ಅರೆಸ್ಟ್ ಮಾಡಲಿ. ಯಾರನ್ನ ಬೇಕಾದರೂ ಅರೆಸ್ಟ್ ಮಾಡಲಿ. ಇವರ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ನಮ್ಮನ್ನ ಜೈಲಿಗೆ ಹಾಕಿದ್ರೂ ಪರವಾಗಿಲ್ಲ. ಪಾದಯಾತ್ರೆ ಮಾಡೇ ಮಾಡುತ್ತೇವೆ ಎಂದರು.

ಕೊರೋನಾ ರೂಲ್ಸ್ ಗೆ ಗೌರವ ಕೊಡ್ತೇವೆ. ಕೊರೋನಾ ಇದೆ ಆದರೆ ಎಲ್ಲರೂ ಗುಂಪಾಗಿದ್ದಾರಲ್ಲ. ಪರಿಷತ್ ಸದಸ್ಯರ ಪ್ರಮಾಣವಚನದಲ್ಲಿ ಅಷ್ಟೊಂದು ಜನ ಸೇರಿದ್ರಲ್ಲ. ಕೇಸ್ ಯಾಕೆ ಹಾಕಿಲ್ಲ..? ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು.

Key words: congress-kpcc-president- DK Shivakumar-covid rules