ಕಾಂಗ್ರೆಸ್,ಜೆಡಿಎಸ್ ನಿಂದ ಅಭಿವೃದ್ಧಿಯಾಗಿಲ್ಲ: ಭ್ರಷ್ಟಾಚಾರಮುಕ್ತ ಆಡಳಿತ ನೀಡಲು ಬಿಜೆಪಿ ಗೆಲ್ಲಿಸಿ- ಕೇಂದ್ರ ಸಚಿವ ಅಮಿತ್ ಶಾ ಮನವಿ.

ಮಂಡ್ಯ,ಡಿಸೆಂಬರ್,30,2022(www.justkannada.in): ಕಾಂಗ್ರೆಸ್ ಜೆಡಿಎಸ್ ನಿಂದ ಕರ್ನಾಟಕ ಅಭಿವೃದ್ದಯಾಗಿಲ್ಲ ಕಾಂಗ್ರೆಸ್ ಜೆಡಿಎಸ್  ಭ್ರಷ್ಟಾಚಾರ ಮಾಡಿವೆ.  ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ದೆಹಲಿಗೆ ಎಟಿಎಂ ಆಗುತ್ತೆ. ಹೀಗಾಗಿ ಭ್ರಷ್ಟಾಚಾರಮುಕ್ತ ಆಡಳಿತ ನೀಡಲು ಬಿಜೆಪಿ ಗೆಲ್ಲಿಸಿ ಎಂದು ಮಂಡ್ಯ ಮತ್ತು ಮೈಸೂರು ಭಾಗದ ಜನರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದರು.

ಮಂಡ್ಯ ವಿವಿ ಆವರಣದಲ್ಲಿ ಆಯೋಜಿಸಿದ್ದ ಬಿಜೆಪಿ ಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ  ಅವರ ತಾಯಿ ಹೀರಾಬೆನ್ ಅವರು ನಮ್ಮೊಂದಿಗಿಲ್ಲ. ತಾಯಿಯನ್ನ  ಕಳೆದುಕೊಂಡ ಪ್ರಧಾನಿ ಮೋದಿ ಜೊತೆ ನಾವೆಲ್ಲರೂ ಇದ್ದೇವೆ.  ಮೋದಿ ತಾಯಿ ಹೀರಾಬೆನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಮೇಲುಕೋಟೆ ಚಲುವರಾಯಸ್ವಾಮಿಗೆ ಆದಿಚುಂಚನಗಿರಿಯ ಕಾಲ ಭೈರವೇಶ್ವರ ಸ್ವಾಮಿ, ಶ್ರೀರಂಗಪಟ್ಟಣ ರಂಗನಾಥಸ್ವಾಮಿಗೂ ಪ್ರಾರ್ಥನೆ ಸಲ್ಲಿಸುತ್ತೇನೆ. ಬಿಜೆಪಿ ಬಡವರ ಕಲ್ಯಾಣಕ್ಕೆ ಹಲವು ಜನಪರ ಯೋಜನೆ ಜಾರಿ ಮಾಡಿದೆ.  ಬಡವರು ಬದುಕುವಂತಹ ವಾತಾವರಣವನ್ನ ನಿರ್ಮಿಸಿದ್ದೇವೆ. ಅನೇಕ ಕ್ರಿಮಿನಲ್ ಗಳು ಭ್ರಷ್ಟಾಚಾರಿಗಳು ಜೆಡಿಎಸ್ ಕಾಂಗ್ರೆಸ್ ನಲ್ಲಿದ್ದಾರೆ. ಮೈಶುಗರ್ ಕಾರ್ಖಾನೆಯನ್ನ ಪುನಾರಂಭ ಮಾಡಿದ್ದೇವೆ. ಹಳೇ ಮೈಸೂರು ಭಾಗಕ್ಕೆ ಕಾಂಗ್ರೆಸ್ ಜೆಡಿಎಸ್ ಏನು ಮಾಡಿಲ್ಲ ಎಂದು ಗುಡುಗಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಪಿಎಫ್ ಐ ಕೇಸ್ ವಾಪಸ್ ತೆಗೆದುಕೊಂಡಿದ್ದಾರೆ. ಆದ್ರೆ ದೇಶದ್ರೋಹಿ ಪಿಎಫ್ ಐ ಬ್ಯಾನ್ ಮಾಡಿದ್ದು ಮೋದಿ. ಭಯೋತ್ಪಾದನೆ ಸಂಘಟನೆಯಾಗಿದ್ದ ಪಿಎಫ್ ಐ ಬ್ಯಾನ್ ಮಾಡಿದರು. ಮೋದಿ ಕೈ ಬಲಪಡಿಸಿ  2023 ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ. ಭ್ರಷ್ಟಾಚಾರಮುಕ್ತ ಆಡಳಿತ ನೀಡಲು ಬಿಜೆಪಿ ಗೆಲ್ಲಿಸಿ. ಕರ್ನಾಟಕದಲ್ಲಿ 140ಕ್ಕೂ ಹಚ್ಚು ಸ್ಥಾನ ಗೆಲ್ಲಿಸಿ ಎಂದು ಅಮಿತ್ ಶಾ ಮನವಿ ಮಾಡಿದರು.

Key words: Congress – JDS- not- developed-corruption free –governance-bjp-Amit sha