ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದು ಕಾಂಗ್ರೆಸ್: ಜನರ ಬಳಿ ಕ್ಷಮೆ ಕೇಳಲಿ- ಆರ್.ಅಶೋಕ್ ಆಗ್ರಹ.

ಬೆಂಗಳೂರು,ಜನವರಿ,30,2024(www.justkannada.in): ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದು ನಾವಲ್ಲ ಕಾಂಗ್ರೆಸ್. ಹೀಗಾಗಿ ಜನರ ಬಳಿ  ಕಾಂಗ್ರೆಸ್ ನಾಯಕರು ಕ್ಷಮೆ ಕೇಳಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಮಂಡ್ಯದಲ್ಲಿ ಬೆಳಿಗ್ಗೆ ಹಾರಿಸುವ ರಾಷ್ಟ್ರಧ್ವಜವನ್ನ ನೀವು ಮಧ್ಯಾಹ್ನ ಹಾರಿಸಿದ್ದೀರಿ. ಹನುಮ ಧ್ವಜ ತೆಗೆಯಲು ಹೋಗಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದೀರಿ. ಹೀಗಾಗಿ ರಾಜ್ಯದ ಜನರ ಬಳಿ ಕಾಂಗ್ರೆಸ್ ನವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ರಾಷ್ಟ್ರಪತಿಗಳನ್ನ ಏಕವಚನದಲ್ಲಿ ಸಂಬೋಧಿಸುತ್ತಾರೆ. ಇದು ಸಿದದರಾಮಯ್ಯನವರ ಸಭ್ಯತೆ, ಸಂಸ್ಕೃತಿ ಏನಂತ ತೋರಿಸುತ್ತೆ.  ನಾನ ಸಿದ್ದರಾಮಯ್ಯರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಟೀಕೆ ವ್ಯಕ್ತಪಡಿಸಿದ್ದರು. ಆಕಾಶದಿಂದ ನಕ್ಷತ್ರ ಬಿದ್ದಂತೆ ಮಾತನಾಡಿದ್ದ ಸಭ್ಯರು ಈಗೇಕೆ ಸುಮ್ಮನಿದ್ದಾರೆ. ಎಲ್ಲಿಗೆ ಹೋದರು ಗೊತ್ತಿಲ್ಲ ಎಂದು ಆರ್.ಅಶೋಕ್ ಕಿಡಿಕಾರಿದರು.

Key words: Congress – insulted – national flag- R.Ashok