Saturday, September 19, 2026

BDA Apartments

ಲಿಂಗಾಯತರಿಗೆ ಅವಮಾನ ಮಾಡಿದ ಪಕ್ಷಕ್ಕೆ ಹೋಗಿದ್ದಾರೆ: ಕಾಂಗ್ರೆಸ್ ಗೆ ಆ ಇಬ್ಬರ...
Home Front Page ಲಿಂಗಾಯತರಿಗೆ ಅವಮಾನ ಮಾಡಿದ ಪಕ್ಷಕ್ಕೆ ಹೋಗಿದ್ದಾರೆ: ಕಾಂಗ್ರೆಸ್ ಗೆ ಆ ಇಬ್ಬರು ನಾಯಕರಿಂದ ಲಾಭ ಇಲ್ಲ-ಅಮಿತ್...

ಲಿಂಗಾಯತರಿಗೆ ಅವಮಾನ ಮಾಡಿದ ಪಕ್ಷಕ್ಕೆ ಹೋಗಿದ್ದಾರೆ: ಕಾಂಗ್ರೆಸ್ ಗೆ ಆ ಇಬ್ಬರು ನಾಯಕರಿಂದ ಲಾಭ ಇಲ್ಲ-ಅಮಿತ್ ಶಾ ವಾಗ್ದಾಳಿ.

ಬಾಗಲಕೋಟೆ,ಏಪ್ರಿಲ್,25,2023(www.justkannada.in):  ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ ಪಕ್ಷಕ್ಕೆ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಹೋಗಿದ್ದಾರೆ. ಈ ಇಬ್ಬರು ನಾಯಕರಿಂದ ಕಾಂಗ್ರೆಸ್ ಗೆ ಲಾಭವಿಲ್ಲ ಎಂದು ಕೇಂದ್ರಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.

ಬಾಗಲಕೋಟೆ ಜಿಲ್ಲೆ ತೇರದಾಳ ಕ್ಷೇತ್ರ ವ್ಯಾಪ್ತಿಯ ರಬಕವಿಬನಹಟ್ಟಿಯಲ್ಲಿ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ, ಲಿಂಗಾಯತ ಸಿಎಂಗಳನ್ನು ಅವಮಾನಿಸಿದ್ದು ಕಾಂಗ್ರೆಸ್ ಪಕ್ಷ. ಆದರೆ ಬಿಜೆಪಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದೆ. ಮಾಜಿ ಸಿಎಂ ಬಿಎಸ್ ​ವೈಗೆ ಮೋಸ ಮಾಡಿದ್ದು ಜೆಡಿಎಸ್ ​ನವರು. ಜೆಡಿಎಸ್​ ಎಷ್ಟೇ ಸೀಟ್ ಗೆದ್ದರೂ ಕಾಂಗ್ರೆಸ್​ ಜತೆ ಹೋಗ್ತಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿಗೆ ಮತ್ತೊಮ್ಮೆ ಸ್ಪಷ್ಟ ಬಹುಮತ ನೀಡಿ ಎಂದು ಮನವಿ ಮಾಡಿದರು.ಲಿಂಗಾಯತರಿಗೆ ಅವಮಾನ ಮಾಡಿದ ಪಕ್ಷಕ್ಕೆ ಹೋಗಿದ್ದಾರೆ amith sha

ಬಾಗಲಕೋಟೆ  ಒಂದು ಐತಿಹಾಸಿಕ ಹಿನ್ನೆಲೆಯುಳ್ಳ ಹಳ್ಳಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಅಭಿವೃದ್ದಿಯಾಗುವುದಿಲ್ಲ. ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚಿಸೋಣ. ಬಿಎಸ್ ವೈ, ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ಅಭಿವೃದ್ದಿಯಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಅಮಿತ್ ಶಾ ಹೇಳಿದರು.

Key words: congress- insulted –Lingayats-central minister- Amit Shah