Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Front Page ಏಳೇಂಟು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಏಳೇಂಟು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ವಿಜಯಪುರ,ಆಗಸ್ಟ್,14,2023(www.justkannada.in): ಏಳೇಂಟು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ. ಅಲ್ಲಿವರೆಗೆ ಕಾಯಿರಿ ಎಂದು ಬಿಜೆಪಿ ಕಾರ್ಯರ್ತರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, 6 ರಿಂದ 7 ತಿಂಗಳಳ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ. ಸರ್ಕಾರ ಬೀಳುವವರೆಗೂ ಸಮಾದಾನದಿಂದ ಇರಬೇಕು. ಕಾಂಗ್ರೆಸ್ ಶಾಸಕರಿಗೆ ಕೊಡಲು ಅನುದಾನ ಇಲ್ಲ. ನಮ್ಮ ಸರ್ಕಾರ ಬರುತ್ತೆ ಅನುದಾನ ನೀಡುತ್ತೇವೆ. 6ರಿಂದ 7 ತಿಂಗಳು ತುಂಬಾ ಕಷ್ಟ ಇದೆ ಎಂದರು.

ಲೋಕಸಭೆ ಚುನಾವಣೆ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಈಗ ಅನುದಾನ ಕೇಳಬೇಡಿ ಅಂತಿದ್ದಾರೆ. ಹೀಗಾಗಿ ಸರ್ಕಾರ ಬೀಳುತ್ತೆ. ಹೊಸ ಸರ್ಕಾರ ಬಂದಾಗ ಸಮಯ ಬೇಕು ಇನ್ಮುಂದೆ ನಮ್ಮ ಹೋರಾಟ ಶುರು ಎಂದರು.

ಯಾರು ಏನೇ ಭವಿಷ್ಯ ನುಡಿದರೂ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ.  ಲೋಕಸಭೆ ಚುನಾವಣೆಯಲ್ಲಿ ಮೋದಿ ನೋಡಿ ವೋಟ್ ಹಾಕಿ ಎಂದು ಕಾರ್ಯಕರ್ತರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಕರೆ ನೀಡಿದರು.

Key words: Congress -government – fall – seven – eight -months-MLA- Basan Gowda Patil Yatnal.