ನನಗೆ ಕಾಂಗ್ರೆಸ್ ಉತ್ಸವ ಬೇಕು, ಬೇರೆ ಯಾವ ಉತ್ಸವವೂ ಬೇಡ- ಡಿಕೆ ಶಿವಕುಮಾರ್

 

ಬೆಂಗಳೂರು,ಜುಲೈ,13,2022(www.justkannada.in):  ಸಿದ್ಧರಾಮೋತ್ಸವ ಬಳಿಕ ಇದೀಗ ಶಿವಕುಮಾರೋತ್ಸವ ಮಾಡುವಂತೆ ತಮ್ಮ ಬೆಂಬಲಿಗ ಬಹಿರಂಗ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ಅಭಿಮಾನಿಗಳು ಏನು ಹೇಳ್ತಾರೋ ಅದು ಅವರಿಗೆ ಬಿಟ್ಟಿದ್ದು.  ನನಗೆ ಕಾಂಗ್ರೆಸ್ ಉತ್ಸವ ಬೇಕು ಬೇರೆ ಉತ್ಸವ ಬೇಡ.  ನನ್ನ ಪೂಜೆ ಯಾರೂ ಮಾಡಬೇಡಿ. ಪಕ್ಷದ ಪೂಜೆ ಮಾಡಿ.  ನನಗೆ ಯಾವ ಉತ್ಸವವೂ ಬೇಡ. ಕಾಂಗ್ರೆಸ್ ಉತ್ಸವ ಮಾಡಲಿ ಎಂದಿದ್ದಾರೆ.

ಶಿವಕುಮಾರೋತ್ಸವ ಮಾಡುವಂತೆ ಕೆಪಿಸಿಸಿ ಮಾಧ್ಯಮ‌ ವಿಭಾಗದ ಸಂಯೋಜಕ ಜಿ.ಸಿ.ರಾಜು ಬಹಿರಂಗ ಪತ್ರ ಬರೆದಿದ್ದರು.

Key words: congress- festival-No other -festival -DK Shivakumar