ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ: ಅವರು ಕರೆ ನೀಡಿರುವ ಬಂದ್ ಗೆ ಜನಬೆಂಬಲ ಸಿಗಲ್ಲ- ಸಿಎಂ ಬೊಮ್ಮಾಯಿ.

ಹುಬ್ಬಳ್ಳಿ,ಮಾರ್ಚ್,6,2023(www.justkannada.in): ಮಾರ್ಚ್ 9 ರಂದು ಎರಡು ಗಂಟೆಗಳ ಕಾಲ ಬಂದ್ ಕರೆ ನೀಡಿರುವ ಕಾಂಗ್ರೆಸ್ ಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಹೀಗಾಗಿ ಕಾಂಗ್ರೆಸ್ ಕರೆ ನೀಡಿರುವ ಬಂದ್ ಗೆ ಜನ ಬೆಂಬಲಿಸಲ್ಲ. ದಿಂಬು, ಹಾಸಿಗೆ ಬಿಸ್ಕೆಟ್ ಕಾಫಿಯಲ್ಲೂ ಭ‍್ರಷ್ಟಾಚಾರ ಮಾಡಿದ್ದಾರೆ.  ಸಿದ್ದರಾಮಯ್ಯ ಎಷ್ಟು ಟಾರ್ಗೆಟ್ ಕೊಟ್ಟಿದ್ದಾರೆಂದು ಕೇಳಬೇಕು ಎಂದು ಕಿಡಿಕಾರಿದರು.

ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ. ಕಾಂಗ್ರೆಸ್ ನವರ ಕೈ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ ಈಗಾಗಲೇ ರಾಜ್ಯದ ಜನರು ಕಾಂಗ್ರೆಸ್ ಆಟ ನೋಡಿದ್ದಾರೆ ಯಾರು ಸತ್ಯಹರಿಶ್ಚಂದ್ರರೆಂದು ಜನರಿಗೆ ಗೊತ್ತಿದೆ ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

Key words: Congress – drowning – corruption-people-not -support- CM Bommai.