Friday, September 18, 2026

BDA Apartments

Home Front Page ಈ ಬಾರಿಯೂ ಡಿ.ಕೆ ಸುರೇಶ್ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತಾರೆ- ಸಿಎಂ ಸಿದ್ದರಾಮಯ್ಯ ವಿಶ್ವಾಸ.

ಈ ಬಾರಿಯೂ ಡಿ.ಕೆ ಸುರೇಶ್ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತಾರೆ- ಸಿಎಂ ಸಿದ್ದರಾಮಯ್ಯ ವಿಶ್ವಾಸ.

ರಾಮನಗರ,ಮಾರ್ಚ್,28,2024 (www.justkannada.in):  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ನಮ್ಮ ಅಭ್ಯರ್ಥಿ ಡಿ.ಕೆ ಸುರೇಶ್ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ಈ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ನಮ್ಮ ಅಭ್ಯರ್ಥಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.  ಡಿ.ಕೆ ಸುರೇಶ್ ಕ್ರಿಯಾಶೀಲ ರಾಜಕಾರಣಿ. ಅವರು ಮನೆ ಮನೆಗೆ ಗೊತ್ತಿರುವಂತಹ ವ್ಯಕ್ತಿ. ಇವರನ್ನ  4ನೇ ಬಾರಿಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ ಎಂದರು.ಈ ಬಾರಿಯೂ ಡಿ.ಕೆ ಸುರೇಶ್ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತಾರೆ dk suresh-siddaram...

ಬಿಜೆಪಿಯವರು 5 ಗ್ಯಾರಂಟಿಗಳು ಮುಂದುವರೆಸಲ್ಲ ಅಂತಾರೆ.  ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಅಂದ್ರು.  ಅವರ ಯಾವ ಟೀಕೆಗಳಿಗೂ ನಾವ್ಯಾರೂ ವಿಚಲಿತರಾಗಲಿಲ್ಲ.  ನಾವು ಅಧಿಕಾರ ಸ್ವೀಕರಿಸಿದ ದಿನದಂದೇ ತೀರ್ಮಾನಿಸಿದ್ವಿ.  ನಮ್ಮ ಗ್ಯಾರಂಟಿ ಜಾರಿ ಮಾಡಬೇಕೆಂದು ತೀರ್ಮಾನ ಮಾಡಿದ್ದವು.  ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

Key words: congress, DK Suresh, CM Siddaramaiah