ರಾಹುಲ್ ಪಾದಯಾತ್ರೆ: ಕಾಂಗ್ರೆಸ್ ಚುನಾವಣಾ ಗೆಲುವಿನ ಬರ ನೀಗಿಸಲಿದೆಯೇ..?

ಬೆಂಗಳೂರು, ಅಕ್ಟೋಬರ್ 10, 2022(www.justkannada.in): ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಸ್ಥಾನವನ್ನು ಅಲಂಕರಿಸಲು ಸಿದ್ಧರಿಲ್ಲ. ಪ್ರಸ್ತುತ ಆ ಸ್ಥಾನವನ್ನು ಬೇಡವೆನ್ನಲು ಅವರಿಗೆ ಹಲವು ಕಾರಣಗಳಿರಬಹುದು. ಆದರೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು, ಭಾರತ ಜೋಡೊ ಯಾತ್ರೆಯ ನಾಯಕತ್ವವನ್ನು ವಹಿಸಿಕೊಂಡಿರುವ ರಾಹುಲ್ ಹಿಂದೆ ಓಡುತ್ತಿರುವುದೇಕೆ? ರಾಹುಲ್ ಪ್ರಸ್ತುತ ಕೇವಲ ಓರ್ವ ಲೋಕಸಭಾ ಸದಸ್ಯರಾಗಿದ್ದರೆ, ಚಿಕ್ಕವರು ದೊಡ್ಡವರು ಎನ್ನದೆ ಎಲ್ಲಾ ವಯೋಮಾನದ ಕಾಂಗ್ರೆಸ್ ನ ನಾಯಕರು ಹಠತೊಟ್ಟು ಅವರನ್ನು ಹಿಂಬಾಲಿಸುತ್ತಿರುವುದೇಕೆ?

2024ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಮುಂದೆ ನಿಂತು ಪಕ್ಷವನ್ನು ನಡೆಸದಿದ್ದರೆ ಈ ಪಾದಯಾತ್ರೆಯ ರಾಜಕೀಯ ಉದ್ದೇಶವಾದರೂ ಏನು? ಆತ ಕೇವಲ ಸಾಮರಸ್ಯ, ಪ್ರೀತಿ ಹಾಗೂ ಶಾಂತಿಧೂತನೇ? ಅಥವಾ ಆತ ಸಾರ್ವಜನಿಕರಲ್ಲಿ ಹಾಗೂ ಪಕ್ಷದ ಜನರಲ್ಲಿ ಎಷ್ಟು ಜನಪ್ರಿಯತೆಯನ್ನು ಗಳಸಿಕೊಂಡಿದ್ದಾರೆ ಎಂಬುದನ್ನು ತೋರಿಸಲು ಈ ಪಾದಯಾತ್ರೆಯನ್ನು ಕೈಗೊಂಡಿರುವರೇ? ಒಂದು ವೇಳೆ ರಾಹುಲ್ ಗಾಂಧಿ ಈಗಿನಂತೆ ಪಕ್ಷದಲ್ಲಿ ಕೇಂದ್ರಶಕ್ತಿ ಸ್ಥಾನವನ್ನು ಹಾಗೇ ಉಳಿಸಿಕೊಳ್ಳುವುದಾದರೆ, ಮುಂದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಬರುವವರಿಗೆ ಎಂತಹ ಸ್ಥಾನವಿರುತ್ತದೇ? ಲೋಕಸಭಾ ಚುನಾವಣೆಗಳಿಗೂ ಮುಂಚೆ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳು ಲಭಿಸಲಿದೆ.

ಒಂದು ವೇಳೆ ಈ ಪ್ರಶ್ನೆಗಳನ್ನು ಪಕ್ಕಕ್ಕೆ ಸರಿಸಿದರೆ, ಈ ಭಾರತ್ ಜೋಡೊ ಯಾತ್ರೆಯಿಂದ ಪಕ್ಷಕ್ಕೆ ಲಭಿಸುವ ಅನೇಕ ಲಾಭಗಳು ಗೋಚರಿಸುತ್ತವೆ. ಈ ರೀತಿಯ ಪಾದಯಾತ್ರೆಗಳು ರಾಜಕಾರಣಿಗಳ ಪಾಲಿಗೆ ಸಾರ್ವಜನಿಕರೊಂದಿಗೆ ಸಂಪರ್ಕ ಬೆಸೆಯಲು ಬಹಳ ಪರಿಣಾಮಕಾರಿಯಾದ ಸಂವಹನಾ ಕಾರ್ಯತಂತ್ರ ಎನ್ನುವುದು ಈ ಹಿಂದೆ ಅನೇಕ ಬಾರಿ ಸಾಬೀತಾಗಿದೆ. ಸೆಪ್ಟೆಂಬರ್ 8ರಿಂದ ರಾಹುಲ್ ಗಾಂಧಿ ಅವರು ಪಾದಯಾತ್ರೆಯಲ್ಲಿ ತೊಡಗಿದ್ದಾರೆ. ಕೇರಳ ಹಾಗೂ ಕರ್ನಾಟಕದ ಕೆಲವು ಕಡೆಗಳಲ್ಲಿ ಅವರು ಹೊತ್ತಿಸಿರುವ ಉತ್ಸಾಹದ ಕಿಡಿಗಳಿಗೆ ಅವರ ಎದುರಾಳಿಗಳು ಸಾಕ್ಷಿಯಾಗಿದ್ದಾರೆ.

ಅವರು ಕಾಂಗ್ರೆಸ್ ನ ಇತರೆ ನಾಯಕರ ಜೊತೆಗೂಡಿ ಕಾಲ್ನಡಿಗೆ ಮಾಡುತ್ತಿದ್ದಾರೆ. ಕೆಲವರು ಅಗತ್ಯವಿರುವ ವ್ಯವಸ್ಥೆಗಳ ನಿಗಾವಹಿಸುತ್ತಿದ್ದಾರೆ. ಕಾರ್ಯಕರ್ತರು ಹೇಳುವ ಪ್ರಕಾರ, ರಾಹುಲ್ ಅವರು ಸರಿಯಾಗಿ ಬೆಳಿಗ್ಗೆ 6.30ಕ್ಕೆ ಪಾದಯಾತ್ರೆಯನ್ನು ಆರಂಭಿಸುತ್ತಾರೆ. ಈ 3,500 ಮೈಲಿಗಳಷ್ಟು ದೂರದ ಪಾದಯಾತ್ರೆಗಾಗಿ ರಾಹುಲ್ ಅವರು ತಮ್ಮ ದೇಹವನ್ನು ಸಿದ್ಧಪಡಿಸಿಕೊಳ್ಳಲು ಮೂರು ತಿಂಗಳ ಕಾಲ ಅಭ್ಯಸಿಸಿದ್ದಾರೆ ಎನ್ನಲಾಗಿದೆ. 52 ವರ್ಷದ ವಯಸ್ಸಿನಲ್ಲೂ ಒಂದು ದಿನದಲ್ಲಿ 12 ರಿಂದ 14 ಕಿ.ಮೀ.ಗಳಷ್ಟು ಕಾಲ್ನಡಿಗೆ ಮಾಡುವುದೆಂದರೆ ಅಷ್ಟು ಸುಲಭದ ಮಾತಲ್ಲ. ಕೆಲವು ದಿನಗಳಂದು ಅವರು 22 ರಿಂದ 24 ಕಿ.ಮೀ.ಗಳಷ್ಟು ದೂರ ನಡೆದಿರುವ ಪ್ರಸಂಗಗಳೂ ಇವೆ. ಇವರು ‘ಫಿಟ್ ಇಂಡಿಯಾ ಮೂವ್ ಮೆಂಟ್’ಗೆ ಒಂದು ಉತ್ತಮ ಉದಾಹರಣೆ. ಗ್ರಾಮಗಳಲ್ಲಿ ಜನರು ಇವರನ್ನು ಭೇಟಿ ಮಾಡಲು ಸಾಲುಗಟ್ಟಿ ನಿಂತಿರುತ್ತಾರೆ.  ಈ ಪೈಕಿ ಕೆಲವರು ಅವರ ಮೇಲಿನ ಅಭಿಮಾನದಿಂದ ಬಂದರೆ, ಇನ್ನೂ ಕೆಲವರು ಇಂದಿರಾ ಗಾಂಧಿಯವರ ಮೊಮ್ಮಗನನ್ನು ಕಣ್ಣಾರೆ ನೋಡಿ ತೃಪ್ತಿಪಟ್ಟುಕೊಳ್ಳುವ ಸಲುವಾಗಿ ಬಂದವರಾಗಿದ್ದಾರೆ.

ಒಟ್ಟಾರೆಯಾಗಿ ರಾಹುಲ್ ಗಾಂಧಿ ಪ್ರಸ್ತುತ ಮಾಧ್ಯಮಗಳ ಮುಖ್ಯ ಆಕರ್ಷಣೆಯಾಗಿದ್ದಾರೆ. ವಿವಿಧ ಮಾಧ್ಯಮಗಳ ವರದಿಗಾರರು ಇವರನ್ನು ಕಾಲ್ನಡಿಗೆ ಯಾತ್ರೆಯಿಡೀ ಹಿಂಬಾಲಿಸಿಕೊಂಡು ಹೋಗುತ್ತಿದ್ದಾರೆ. ಅವರ ಯಾತ್ರೆಯನ್ನು ವರದಿ ಮಾಡಲು ನವದೆಹಲಿ ಮೂಲದ ಮಾಧ್ಯಮ ಸಿಬ್ಬಂದಿಗಳ ಒಂದು ಇಡೀ ತಂಡವನ್ನೇ ಬಳಸಿಕೊಳ್ಳಲಾಗಿದೆ. ಕಳೆದ ಮೂರು ತಿಂಗಳಿಂದ ನಿದ್ದೆಯಲ್ಲಿದ್ದಂತಹ ಕಾಂಗ್ರೆಸ್ ಗೆ ರಾಹುಲ್ ಸ್ವಲ್ಪಮಟ್ಟಿಗಾದರೂ ಉತ್ಸಾಹ ಹಾಗೂ ಸಕಾರಾತ್ಮಕತೆಯನ್ನು ತುಂಬಿದ್ದಾರೆ ಎನ್ನಬಹುದು. ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ರಾಜ್ಯ ಬಿಜೆಪಿ ಸರ್ಕಾರ ನೀಡುತ್ತಿರುವ ಮಾಧ್ಯಮ ಜಾಹೀರಾತುಗಳಿಗೆ ಯಾವುದೇ ಆಧಾರವಿಲ್ಲ. ಇಂತಹ ಜಾಹೀರಾತುಗಳನ್ನು ಉದ್ದೇಶಪೂರ್ವಕವಾಗಿಯೋ ಅಥವಾ ಅರಿವಿಲ್ಲದೆಯೋ, ಒಟ್ಟು ನಿರ್ಲಕ್ಷಿಸುವುದು ರಾಹುಲ್ ಅವರ ನಿರ್ಧಾರವಾಗಿದೆ, ಇದೊಂದು ಸಕಾರಾತ್ಮಕ ವಿಷಯವೇ.

ಮೃದು ಹಿಂದುತ್ವ

ರಾಹುಲ್ ಗಾಂಧಿ ಮುಂದಾಳತ್ವದ ಕಾಂಗ್ರೆಸ್ ತನ್ನ ಮೃದು ಹಿಂದುತ್ವ ಧೋರಣೆಯೊಂದಿಗೆ ಮುಂದುವರೆದಿದೆ. ಅವರು ಕುಂಕುಮ ಮತ್ತು ಶಾಲು ಹೊದ್ದುಕೊಂಡು ವಿವಿಧ ಹಿಂದೂ ದೇವಾಲಯಗಳಿಗೂ ಭೇಟಿ ನೀಡಿದ್ದಾರೆ. ರಾಹುಲ್ ಅವರ ತಾಯಿ ಸೋನಿಯಾ ಗಾಂಧಿಯೂ ಸಹ ತಮ್ಮ ಭಕ್ತಿಯನ್ನು ಪ್ರದರ್ಶಿಸುವಲ್ಲಿ ಹಿಂದೆ ಬಿದ್ದಿಲ್ಲ. ವಿಜಯದಶಮಿ ದಿನದಂದು ಆಕೆ ಹೆಚ್.ಡಿ.ಕೋಟೆಯಲ್ಲಿರುವ ಒಂದು ದೇವಾಲಯಕ್ಕೆ ಭೇಟಿ ನೀಡಿದರು. ಮೈಸೂರಿನಲ್ಲಿರುವ ಒಂದು ಚರ್ಚ್ ಮತ್ತು ಒಂದು ಮಸೀದಿಗೂ ಭೇಟಿ ನೀಡಿದರು. ರಾಹುಲ್ ಗಾಂಧಿ ಅವರು ಒಕ್ಕಲಿಗ ಸ್ವಾಮೀಜಿಗಳಿಂದ ಆಶೀರ್ವಾದವನ್ನೂ ಪಡೆದುಕೊಂಡರು. ಪಾದಯಾತ್ರೆಯ ಸಮಯದಲ್ಲಿ ತಮ್ಮ ತಾಯಿ ಪಾದರಕ್ಷೆಗಳ ಲೇಸ್ ಅನ್ನು ಕಟ್ಟುತ್ತಿರುವಂತಹ ಇವರ ಒಂದು ಚಿತ್ರ ವೈರಲ್ ಆಯಿತು. ನಾಗರಹೊಳೆಯಲ್ಲಿ ಒಂದು ಮರಿ ಆನೆ ಗಾಯಗೊಂಡಿರುವುದನ್ನು ನೋಡಿ ಮರುಕಪಟ್ಟರು. ಮಳೆಯಲ್ಲೂ ಸಹ ಸಾರ್ವಜನಿಕ ಭಾಷಣದಲ್ಲಿ ಭಾಗವಹಿಸಿದರು. ಕೋವಿಡ್-೧೯ ಸಾಂಕ್ರಾಮಿದ ಸಮಯದಲ್ಲಿ ರಾಜ್ಯ ಸರ್ಕಾರದ ಅಸಮರ್ಪಕ ನಿರ್ವಹಣೆಯಿಂದಾಗಿ ಪೋಷಕರನ್ನು ಕಳೆದುಕೊಂಡಂತಹ ಕೆಲವು ಯುವಜನರನ್ನೂ ಸಹ ಭೇಟಿ ಮಾಡಿ ಅವರ ಕಷ್ಟಗಳನ್ನು ಆಲಿಸಿದರು. ಭದ್ರತಾ ಕಾಳಜಿಗಳನ್ನು ಲೆಕ್ಕಿಸದೆ ಹೆಚ್ಚು ನಡೆಯುತ್ತಿದ್ದು, ಮಾತುಗಳನ್ನು ಕಡಿಮೆ ಮಾಡಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಳ್ಳುವ ಪಾದಯಾತ್ರೆಯಾದ್ಯಂತ ಇದೇ ಸನ್ನಿವೇಶ ಇನ್ನೂ ಹಲವು ಬಾರಿ ಮರುಕಳಿಸಬಹುದು. ಅವರ ಸಹಚರರು ಜನರ ಗುಂಪನ್ನೂ ಕ್ರೋಢಿಕರಿಸುವುದನ್ನು ಮುಂದುವರೆಸಲಿದ್ದಾರೆ. ಆದರೆ ಸಹಚರರು ಬೇರೆ ಬೇರೆ ಆಗಿರುತ್ತಾರೆ.

ಈವರೆಗೂ ರಾಹುಲ್ ಅವರು, ಟಿಪು ಸುಲ್ತಾನ್, ಹಿಜಾಬ್ ಅಥವಾ ಪೇಸಿಎಂ ಅಭಿಯಾನ ಸೇರಿದಂತೆ ರಾಜ್ಯ ಕಾಂಗ್ರೆಸ್ ಪಕ್ಷದ ಯಾವುದೇ ಮೆಚ್ಚಿನ ವಿಷಯಗಳನ್ನೂ ಸಹ ಎಲ್ಲಿಯೂ ಸಂಬೋಧಿಸಿಲ್ಲ. ಈ ವಿಷಯಗಳನ್ನು ಪಕ್ಷದ ಕರ್ನಾಟಕದ ನಾಯಕರಿಗೆ ಉದ್ದೇಶವಪೂರ್ವಕವಾಗಿಯೇ ಬಿಟ್ಟುಕೊಟ್ಟಿರುವಂತೆ ಗೋಚರಿಸುತ್ತದೆ. ಆಗಾಗ ನಡುವೆ ಕರ್ನಾಟಕದ ಬಿಜೆಪಿ ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದು ಟೀಕಿಸಿರುವುದು ಕಂಡು ಬಂದಿದೆ. ಆದರೆ ಮೋದಿಯವರ ವಿರುದ್ಧ ಮಾತ್ರ ದೇಶದ ಜನರಲ್ಲಿ ಸಾಮರಸ್ಯ ಕದಡಿರುವುದಕ್ಕೆ ಮತ್ತು ಭಯವನ್ನು ಹುಟ್ಟುಹಾಕಿರುವುದಾಗಿ ಆಗಾಗ ಆರೋಪಿಸಿರುತ್ತಾರೆ.

ನಿಲುವೇನು?

ಈಗ ಪ್ರಶ್ನೆ ಏನೆಂದರೆ ಬಿಜೆಪಿ ಪಕ್ಷದ ನಿಲುವಿನ ಹೋಲಿಕೆಯಲ್ಲಿ ರಾಹುಲ್ ಅವರು ಭಿನ್ನವಾಗಿ ತಮ್ಮ ಪಕ್ಷದ ನಿಲುವನ್ನು ಯಾವ ರೀತಿ ತೋರಿಸಲಿದ್ದಾರೆ ಎನ್ನುವುದಾಗಿದೆ. ಕಾಂಗ್ರೆಸ್ ನ ಕಾರ್ಯಸೂಚಿ ಏನು? ಈ ಪಾದಯಾತ್ರೆಯ ಮೂಲಕ ಭಾರತೀಯರಿಗೆ ಪಕ್ಷ ಏನನ್ನು ನೀಡಲು ಬಯಸಿದೆ? ಬಿಜೆಪಿಯನ್ನು ಹಿಂಸೆ ಹಾಗೂ ಅಸತ್ಯ ಎಂದು ರಾಹುಲ್ ಗುರುತಿಸಿದ್ದಾರೆ. ಈ ಎರಡೂ ವಿಷಯಗಳು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮಾರಾಟ ಮಾಡುತ್ತಿರುವ ವಿಷಯಗಳಾಗಿವೆ. ಆತ್ಮನಿರ್ಭರ ಭಾರತದ ಕುರಿತು ಬಹಳ ದೊಡ್ಡದಾಗಿ ಮಾತನಾಡಿದರು, ಹಾಗೂ ಆ ಯೋಜನೆಯ ಪ್ರಗತಿ ಎಷ್ಟರ ಮಟ್ಟಿಗೆ ಆಗಿದೆ ಎಂಬುದಕ್ಕೆ ಇಡೀ ದೇಶವೇ ಸಾಕ್ಷಿಯೂ ಆಗಿದೆ.

ಒಂದು ವೇಳೆ ಬಿಜೆಪಿಯವರು ಹುಟ್ಟುಹಾಕಿರುವ ‘ಆಳವಾಗಿ ವಿಭಜನೆಗೊಂಡಿರುವ ಭಾರತ’ದಲ್ಲಿ ಶಾಂತಿಧೂತನ ಸ್ಥಾನವನ್ನು ರಾಹುಲ್ ಅಲಂಕರಿಸುವುದಾದರೆ, ಕಳೆದ ಎಂಟು ವರ್ಷಗಳಿಂದ ಮೋದಿ ತಂಡದ ರಾಜಕೀಯ ವಿಶ್ಲೇಷಣೆಗಳ ಪ್ರಭಾವಕ್ಕೆ ಒಳಗಾಗಿರುವ ದೇಶದ ಮತದಾರರನ್ನು, ರಾಹುಲ್ ಗಾಂಧಿ ಅವರಿಗೆ ಆಕರ್ಷಿಸುವುದಕ್ಕೆ ಸಾಧ್ಯವಾಗುವುದೇ? ಒಂದು ವೇಳೆ ಈಗ ಮಹಾತ್ಮ ಗಾಂಧಿಯವರು ಜೀವಿಸುತ್ತಿದ್ದು, ಅವರ ಮೆಚ್ಚಿನ ಸತ್ಯಾಗ್ರಹ, ಉಪವಾಸ, ಭಜನೆ, ನಡಿಗೆ, ಅಪ್ಪುಗೆ ಹಾಗೂ ಮಾತುಗಳೂ ಸಹ ಈಗಿನ ಜನರ ಮನಸ್ಥಿತಿಯನ್ನು ಪರಿವರ್ತಿಸುವುದಕ್ಕೆ ಬಹುಶಃ ಅಸಾಧ್ಯವಾಗುತ್ತಿತ್ತೇನೋ? ಸಾಮಾಜಿಕ ಮಾಧ್ಯಮದ ತೀವ್ರ ಬಳಕೆಯೂ ಒಳಗೊಂಡಂತೆ ಹಲವು ಅಂಶಗಳಿಂದಾಗಿ ಭಾರತ ನಿರ್ಧಿಷ್ಟ ಅಭಿಪ್ರಾಯವನ್ನು ಹೊಂದಿದೆ.

ಕಾಂಗ್ರೆಸ್ ಪಕ್ಷ, ನಿರ್ಧಿಷ್ಟವಾಗಿ ತಾಯಿ-ಮಗ ಇಬ್ಬರೂ ಸೇರಿ ಕಾಂಗ್ರೆಸ್ ಪಕ್ಷವನ್ನು ಕಳೆದ 25 ವರ್ಷಗಳಿಂದಲೂ ಮುನ್ನಡೆಸುತ್ತಿದ್ದಾರೆ. ಈ ವಿಷಯವೊಂದೇ ಪಕ್ಷವನ್ನು ದೂಷಿಸಲು ಸಾಕು. ಪ್ರಸ್ತುತ ಪಕ್ಷವನ್ನು ಪುನರುಜ್ಜೀವನಗೊಳಿಸುವ ಹೊರೆ ರಾಹುಲ್ ಮೇಲಿದೆ. ಅವರ ದೃಷ್ಟಿಕೋನವನ್ನು ಜನರು ಕಡೆಗಣಿಸಬಹುದು. ಆದರೆ ಅದು ಅವರ ಆಯ್ಕೆ. ಆಕ್ರಮಣಕಾರಿ ಅಲ್ಲದಿರುವಂತಹ ಹಾಗೂ ಶಾಂತಿ ಮಂತ್ರವನ್ನು ಅವರು ಪ್ರಯೋಗಿಸುತ್ತಿರಬಹುದು ಹಾಗೂ ಪರಿಶೋಧಿಸುತ್ತಿರಬಹುದು. ಇದರಿಂದ ಪಕ್ಷಕ್ಕೆ ಹೊಸ ತಿರುವು ಸಿಗಬಹುದು ಎನ್ನುವುದು ಅವರ ಅಭಿಪ್ರಾಯವಾಗಿರಬಹುದು.

ಆದರೆ, ಇವರ ನಿಲುವು, ಆರ್ಎಸ್ ಎಸ್ ಬೆಂಬಲವಿರುವ ಬಿಜೆಪಿಯ ವಿರುದ್ಧ ಹೋರಾಡುವ ಇವರ ಕಾರ್ಯತಂತ್ರ ಪರಿಣಾಮಕಾರಿಯಾಗುತ್ತದೆಯೋ, ಇಲ್ಲವೋ? ಎನ್ನುವ ಪ್ರಶ್ನೆ ಮುಂದುವರೆಯುತ್ತದೆ. 2024ರ ಲೋಕಸಭಾ ಚುನಾವಣೆಗಳ ಫಲಿತಾಂಶಗಳು ಮಾತ್ರವೇ ಇವರ ಎಲ್ಲಾ ಪ್ರಯತ್ನಗಳು ಎಷ್ಟರ ಮಟ್ಟಿಗೆ ಫಲ ನೀಡಿದೆ ಎನ್ನುವುದಕ್ಕೆ ಉತ್ತರ ನೀಡುತ್ತದೆ. ಚುನಾವಣೆಗಳ ಫಲಿತಾಂಶಗಳಷ್ಟೇ ಅಲ್ಲದೆ, ಪಕ್ಷದವರನ್ನು ಉತ್ತೇಜಿಸಿಕೊಂಡು, ಮತಗಟ್ಟೆಗಳು ತೆರೆಯುವವರೆಗೂ ಅವರಲ್ಲಿ ಬಲವನ್ನು ತುಂಬಿಕೊಂಡು ಹೋದರೂ ಸಾಕು, ಅವರು ಯಶಸ್ವಿಯಾಗಬಹುದು ಎನಿಸುತ್ತದೆ.

ಪ್ರತಿ ರಾಜ್ಯ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರವೂ ಸಹ, ಚುನಾವಣಾ ಫಲಿತಾಂಶ ಅವಲಂಭಿಸಿರುವ ತನ್ನದೇ ಆದ ವಿಭಿನ್ನವಾದ ಆಯಾಮವನ್ನು ಹೊಂದಿದೆ. ಓರ್ವ ನಾಯಕ ಅಥವಾ ಪಕ್ಷ, ಎಲ್ಲಾ ಅಡೆತಡೆಗಳನ್ನು ದಾಟಿ, ಜನರಲ್ಲಿ ಮನವಿ ಮಾಡಬೇಕಾದರೆ ಪ್ರಸ್ತುತ ಭಾರತ ಎದುರಿಸುತ್ತಿರುವ ರಾಜಕೀಯ ಸನ್ನಿವೇಶದಲ್ಲಿ ಬಹಳ ದೊಡ್ಡ ಸವಾಲೇ ಸರಿ. ಕಾಂಗ್ರೆಸ್ ದೇಶದ ಬಹಳ ಹಳೆಯ ಪಕ್ಷವಾಗಿದ್ದು ರಾಜ್ಯಗಳಲ್ಲಿ ತನ್ನ ಬೇರುಗಳನ್ನು ಹೊಂದಿದೆ. ಮೊದಲು ಈ ಬೇರುಗಳನ್ನು ಗೌರವಿಸಬೇಕು ಮತ್ತು ಪೋಷಿಸಬೇಕು. ರಾಹುಲ್ ಪ್ರಸ್ತುತ ಏನೇ ಹೇಳುತ್ತಿದ್ದರೂ ಸಹ ಮೂರು ಅಭ್ಯರ್ಥಿಗಳ ಪೈಕಿ ಯಾರೇ ಪಕ್ಷದ ಅಧ್ಯಕ್ಷರಾದರೂ ಸಹ ಕೇವಲ ಒಂದು ಶಿಲೆಯಂತಿರುತ್ತಾರೆ.

ಕರ್ನಾಟಕದ ಮೇಲೆ ಪರಿಣಾಮ

ಭಾರತ ಜೋಡೊ ಯಾತ್ರೆಯ ಪರಿಣಾಮ ಕರ್ನಾಟಕದ ಕಾಂಗ್ರೆಸ್ ಪಕ್ಷದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ರಾಹುಲ್ ಗಾಂಧಿ ತಮ್ಮ ಯಾತ್ರೆಯನ್ನು ಆರಂಭಿಸುವುದಕ್ಕೂ ಮುಂಚೆಯೇ, ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಬಣಗಳು ಚುನಾವಣಾ ಮೂಡ್ ಗೆ ಬಂದಿದ್ದವು. ಸಿದ್ದರಾಮಯ್ಯ ಅವರ ಕೈಹಿಡಿದು ತಮ್ಮ ಜೊತೆಯಲ್ಲಿ ಓಡಿದಾಕ್ಷಣ ಅವರನ್ನೇ ಮುಂದಿನ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಯ್ಕೆ ಮಾಡಿಬಿಟ್ಟಿದ್ದಾರೆ ಎಂದಲ್ಲ. ಅದೇ ರೀತಿ ಡಿ.ಕೆ. ಶಿವಕುಮಾರ್ ಅವರು ಯಾತ್ರೆಗೆ ಪಕ್ಷದ ಜನರನ್ನು ಕ್ರೋಢೀಕರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಜೊತೆಗೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕಾಗಿರುವುದರಿಂದ ಆಗಾಗ ಯಾತ್ರೆಯಿಂದ ಮಾಯವಾಗುತ್ತಿದ್ದರೂ ಸಹ ಅವರು ಮುಖ್ಯಮಂತ್ರಿ ಓಟದಿಂದ ಹೊರಬಿದ್ದಿದ್ದಾರೆ ಎನ್ನಲಾಗುವುದಿಲ್ಲ.

ಒಟ್ಟಾರೆಯಾಗಿ ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಈ ಯಾತ್ರೆಯಿಂದ ದೊಡ್ಡ ಲಾಭ ದೊರೆತಿದೆ. ಆದರೆ ಪಕ್ಷದ ಎರಡು ಬಣಗಳ ನಡುವಿನ ಕುದಿಯುತ್ತಿರುವ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನಗಳು ಕಂಡು ಬಂದಿಲ್ಲ. ಇಲ್ಲಿರುವ ಅಸಮಾಧಾನ ಬಹಳ ಆಳವಾಗಿದೆ, ಏಕೆಂದರೆ ಎರಡೂ ನಾಯಕರು ಮುಖ್ಯಮಂತ್ರಿಯಾಗಲು ತೀವ್ರ ಹಂಬಲ ಇಟ್ಟುಕೊಂಡಿದ್ದಾರೆ. ಆದರೆ ರಾಹುಲ್ ಗಾಂಧಿಯವರು ಸಂಘಟಿತ ನಾಯಕತ್ವದಡಿ ಚುನಾವಣೆಗಳನ್ನು ಎದುರಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಪ್ರಸ್ತುತಕ್ಕೆ ಇದು ಸರಿ ಎನಿಸುತ್ತದೆ. ಆದರೆ, ಸಂಘಟಿತ ನಾಯಕತ್ವದಡಿ ಚುನಾವಣೆಗಳನ್ನು ಎದುರಿಸಿದರೂ ಸಹ ಒಬ್ಬ ವ್ಯಕ್ತಿಯ ಕಡೆಗೇ ದೃಷ್ಟಿ ಇರುತ್ತದೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಕಗಳಲ್ಲಿಯೂ ಆಗುತ್ತಿದೆ.

ಇಬ್ಬರೂ ಮುಖ್ಯಮಂತ್ರಿ ಆಕಾಂಕ್ಷಿಗಳೂ ಸಹ ವಿಧಾನಸಭಾ ಚುನಾವಣೆಗಳಿಗೆ ‘ಬಿ’ ಫಾರಂಗಳನ್ನು ವಿತರಿಸುವಾಗ ಬಹಳ ಬುದ್ಧಿವಂತ ನಿಲುವನ್ನೇ ಹೊಂದಿರುತ್ತಾರೆ. ಎಂಎಲ್ಎಗಳು ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ನಾಯಕನನ್ನು ಆಯ್ಕೆ ಮಾಡಬೇಕಾದರೆ, ಇಬ್ಬರೂ ಆಕಾಂಕ್ಷಿಗಳೂ ಸಹ ಅವರ ಮನಸ್ಸಿನಲ್ಲಿ ತಮಗೆ ಆದ್ಯತೆ ನೀಡುವಂತೆ ಮಾಡಬೇಕು. ಒಂದು ವೇಳೆ ತಾಯಿ-ಮಗ,  ಮುಖ್ಯಮಂತ್ರಿಯಾಗಿ ದಲಿತರನ್ನೋ ಅಥವಾ ಮಹಿಳೆಯನ್ನೋ ಮಾಡಲು ಯೋಚಿಸಿದರೆ ಏನಾಗಬಹುದು? ಆದರೆ ಅದಕ್ಕೂ ಮುಂಚೆ ಮೊದಲು ಕಾಂಗ್ರೆಸ್ ತನ್ನ ಮುಂದಿನ ಯೋಜನೆಯನ್ನು ರೂಪಿಸುವುದಕ್ಕೂ ಮೊದಲು ತನ್ನ ಚುನಾವಣಾ ಬರವನ್ನು ನೀಗಿಸಲಿ.

  • ಆಶಾ ಕೃಷ್ಣಸ್ವಾಮಿ

key words: congress-Bharath jodo padayatre-Rahul gandhi

ENGLISH SUMMARY..

Rahul’s walks to help Cong fight the electoral drought?

Bengaluru: Sonia Gandhi and Rahul Gandhi are not ready to occupy the post of All India Congress Committee president. They may have several reasons to shun the post for now. Then why are Congress leaders and workers running behind Rahul, who is leading the Bharat Jodo Yatra? Why are party leaders of all ages tying their shoes to walk and sprint to be at his beck and call if he is simply an MP?

What is the political purpose of the yatra if he is not leading the party from the front to the 2024 Lok Sabha elections? Is he merely a street messenger of harmony, love, and peace? Or is he using the walk-run-talk-rest regimen to gauge how popular he is with the public and party people? What position would the incoming president hold if he maintained his current position as the centre of power? Before the Lok Sabha elections, all of these queries will have their answers.

If these questions are pushed aside, then one can see many pluses in the jodo yatra. The much tried-and-tested padayatra is an effective mass communication strategy for politicians (journey by foot). Since September 8, Rahul has been walking the streets. The excitement he has sparked in some areas of Kerala and Karnataka is evident to his detractors.