ಸಂಘರ್ಷಕ್ಕಿಳಿಯುವುದಿದ್ದರೆ ಬನ್ನಿ- ಸಂಸದ ಪ್ರತಾಪ್ ಸಿಂಹಗೆ ಶಾಸಕ ಹೆಚ್.ಪಿ ಮಂಜುನಾಥ್ ಸವಾಲು…

ಮೈಸೂರು,ಡಿಸೆಂಬರ್,3,2020(www.justkannada.in): ಮೈಸೂರು ಜಿಲ್ಲಾಧಿಕಾರಿ ಮತ್ತು ಕೆಲ ಶಾಸಕರ ನಡುವೆ ಉಂಟಾಗಿದ್ದ ವೈಮನಸ್ಸಿನ ವಿಚಾರ ಸಂಬಂಧ, ಅಧಿಕಾರಿಗಳ ಜನಸ್ಪಂದನ ಕಾರ್ಯಕ್ರಮಕ್ಕೆ ದೊಣ್ಣೆನಾಯಕನ ಅಪ್ಪಣೆ ಬೇಕೆ ಎಂದು ಹೇಳಿಕೆ ನೀಡಿದ್ದ  ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್  ಸವಾಲು ಹಾಕಿದ್ದಾರೆ.logo-justkannada-mysore

ಜನಪ್ರತಿನಿಧಿಗಳಿಗೆ ಮೊದಲು ಗೌರವ ಕೊಡಿ ಅಂತ ಡಿಸಿ ಹೇಳಿ. ಇಲ್ಲವಾದರೆ ಸಂಘರ್ಷಕ್ಕಿಳಿಯುವುದಾದರೆ ಬನ್ನಿ ಎಂದು ಪ್ರತಾಪ ಸಿಂಹರಿಗೆ ಶಾಸಕ ಮಂಜುನಾಥ್ ಸವಾಲು ಹಾಕಿದ್ದಾರೆ.

ಹುಣಸೂರು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ  ಶಾಸಕ ಮಂಜುನಾಥ್, ಜಿಲ್ಲಾಧಿಕಾರಿಗಳು ಸ್ವಂತವಾಹನದಲ್ಲಿ ತಾಲ್ಲೂಕಿಗೆ ಬಂದು ಸಭೆ ಮಾಡುತ್ತಿದ್ದಾರಾ.? ಸರ್ಕಾರ ನೀಡಿರುವ ಕಾರಿನಿಂದ ಬರುತ್ತಾರೆ. ಸರ್ಕಾರ ಕೆಲಸವೆಂದಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಅಂತ ಅಧಿಕಾರಿಗಳಿಗೆ ಹೇಳಬೇಕು‌. ಜನರು ಕೂಡ ನಮ್ಮ ಬಳಿ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಾರೆ ಎಂದು ಕುಟುಕಿದರು.conflict-hunsur-MLA-HP Manjunath –challenged-mysore- MP-Pratap simha

ಸಂಸದರಾಗಿ ಹುಣಸೂರು ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು.?

ಹಾಗೆಯೇ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ಮುಂದುವರೆಸಿದ ಹೆಚ್.ಪಿ ಮಂಜುನಾಥ್ , ಸಂಸದರಾಗಿ ಹುಣಸೂರು ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು.? ತಂಬಾಕು‌ ಬೆಳೆಗಾರರ ಸಮಸ್ಯೆ ಬಗೆಹರಿಸಿ, ಆಗ ನಾನೇ ಕರೆದು ಸನ್ಮಾನ ಮಾಡುತ್ತೀನಿ. ಇಲ್ಲ‌ ಸಂಘರ್ಷಕ್ಕಿಳಿದರೆ ನಾನು ಸಂಘರ್ಷಕ್ಕಿಳಿಯುತ್ತೀನಿ ಎಂದು ಕಿಡಿಕಾರಿದರು.

Key words: conflict-hunsur-MLA-HP Manjunath –challenged-mysore- MP-Pratap simha