ಶಾಸಕರ ಮೇಲೆ ವಿಶ್ವಾಸವಿದೆ: ಅಡ್ಡಮತದಾನದ ಭಯವಿಲ್ಲ- ಸಚಿವ ಎಂ.ಬಿ ಪಾಟೀಲ್.

ಕಲಬುರುಗಿ,ಫೆಬ್ರವರಿ,24,2024(www.justkannada.in): ರಾಜ್ಯಸಭಾ ಚುನಾವಣೆ ಬಗ್ಗೆ ನಮಗೇನು ಭಯವಿಲ್ಲ. ಅಡ್ಡಮತದಾನದ ಬಗ್ಗೆ ನಮಗೆ ಯಾವುದೇ ಭಯವಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಇಂದು ಕಲ್ಬುರ್ಗಿಯಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ನಮ್ಮ ಶಾಸಕರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಎಲ್ಲರೂ ಒಟ್ಟಿಗೆ ಇರೋಣ ಎಂದು ಒಂದೇ ಕಡೆ ಇದ್ದಾರೆ. ಹೀಗಾಗಿ ಅಡ್ಡಮತದಾನದ ಭಯವಿಲ್ಲ ಎಂದರು.

ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ.  ಪಕ್ಷ ಹೇಳಿದರೆ ಸ್ಪರ್ಧೆ ಮಾಡುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅವರ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ.  ಖರ್ಗೆ ಅವರು ಚುನಾವಣೆಗೆ ನಿಲ್ಲಬೇಕೆಂದು ಜನರ ಆಸೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಾಹುಲ್ ಗಾಂಧಿಗೆ ಸಮನ್ಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್,   ಬಿಜೆಪಿ ಸರ್ಕಾರವನ್ನ 40 ಪರ್ಸೆಂಟ್ ಸರ್ಕಾರ ಎಂದು ಹೇಳಿಲ್ಲ. ಗುತ್ತಿಗೆದಾರರ ಸಂಘ ಹೇಳಿದ್ದನ್ನೇ ನಾವು ಹೇಳಿದ್ದೇವೆ. ನಾವು ಕಾನೂನಾತ್ಮಕವಾಗಿ ಉತ್ತರ ನೀಡುತ್ತೇವೆ ಎಂದರು.

Key words: confidence –MLAs- No fear – cross voting – Minister -MB Patil.