ಮುರುಘಾ ಶ್ರೀಗೆ ಷರತ್ತುಬದ್ಧ ಜಾಮೀನು ಮಂಜೂರು:  ಬಿಡುಗಡೆ ಭಾಗ್ಯ ಇಲ್ಲ.

ಬೆಂಗಳೂರು,ನವೆಂಬರ್,8,2023(www.justkannada.in):  ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಶ್ರೀಗೆ ಹೈಕೋರ್ಟ್ ಷರತ್ತು ವಿಧಿಸಿ  ಜಾಮೀನು ಮಂಜೂರು ಮಾಡಿದೆ.

ಮುರುಘಾಶ್ರೀಗೆ  ಮೊದಲ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದು .  2ನೇ ಪ್ರಕರಣದಲ್ಲಿ ಜಾಮೀನು ಸಿಕ್ಕಿಲ್ಲ ಹೈಕೋರ್ಟ್ ನಲ್ಲಿ  ಅರ್ಜಿ ವಿಚಾರಣೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಜಾಮೀನು ಸಿಕ್ಕರೂ ಮುರುಘಾ ಶ್ರೀಗೆ ಬಿಡುಗಡೆ ಭಾಗ್ಯವಿಲ್ಲ.

ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್7 ಷರತ್ತುಗಳನ್ನ ವಿಧಿಸಿದೆ.  ಚಿತ್ರದುರ್ಗಕ್ಕೆ  ಪ್ರವೇಶಿಸುವಂತಿಲ್ಲ. ಇಬ್ಬರು ಶ್ಯೂರಿಟಿ ಒದಗಿಸಬೇಕು.  ಕೋರ್ಟ್ ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಹಬೇಕು. ಪಾಸ್ ಪೋರ್ಟ್ ವಶಕ್ಕೆ ನೀಡಬೇಕು. ಇಂಿಂತಹ ಕೃತ್ಯಗಳನ್ನ ಪುನರಾವರ್ತನೆ ಮಾಡುವಂತಿಲ್ಲ ಎಂದು ಷರತ್ತು ಹಾಕಿದೆ.

Key words: Conditional bail -granted –high court- Mr. Muruga shri