ಪ್ರವೀಣ್ ನೆಟ್ಟಾರು ಹತ್ಯೆಗೆ ಖಂಡನೆ: ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ.

ಬೆಂಗಳೂರು,ಜುಲೈ,28,2022(www.justkannada.in):  ದುಷ್ಕರ್ಮಿಗಳಿಂದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಬಿಜೆಪಿ ಕಾರ್ಯಕರ್ತರು ಪದಾಧಿಕಾರಿಗಳ ಆಕ್ರೋಶದ ಕಟ್ಟೆ ಹೊಡೆದಿದ್ದು, ಹತ್ಯೆ ಖಂಡಿಸಿ ರಾಜ್ಯಾದ್ಯಂತ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ.

ತಮ್ಮದೇ ಪಕ್ಷ ಆಡಳಿತದಲ್ಲಿದ್ದರೂ ಪಕ್ಷದ ಕಾರ್ಯಕರ್ತರು, ಸೈದ್ಧಾಂತಿಕ ಬೆಂಬಲಿಗರ ಸಾಲು ಸಾಲು ಹತ್ಯೆಗಳಾಗುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಜಿಲ್ಲಾ ಮಟ್ಟದ ಹಲವು ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಮೈಸೂರಿನಲ್ಲಿ ಎನ್.ಆರ್. ಕ್ಷೇತ್ರದ  ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಲೋಹಿತ್ ಸೇರಿದಂತೆ ಹಲವು ಪದಾಧಿಕಾರಿಗಳು  ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರವೀಣ್  ನೆಟ್ಟಾರು ಫೋಟೊ ಸ್ಟೇಟಸ್  ಹಾಕಲು ಭಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಬರಲು ಭಯ ಪಡುತ್ತಾರೆ. ನಮ್ಮ ಮನೆಗಳಲ್ಲೂ ಆತಂಕ ಹೆಚ್ಚಾಗಿದೆ. ಈ ಕಾರಣ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಪ್ರವೀಣ್ ಹತ್ಯೆಯನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಂದೀಪ್ ಹರವಿನಂಗಡಿ ರಾಜೀನಾಮೆ ನೀಡಿದ್ದಾರೆ. ರಾಜರಾಜೇಶ್ವರಿ ನಗರ ಮಂಡಲದ ಸಾಮಾಜಿಕ ಜಾಲತಾಣದ ಸಂಚಾಲಕನ ಹುದ್ದೆಗೆ ಶ್ರೀನಿವಾಸ್ ಗೌಡ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಬೆಳಗಾವಿಯಲ್ಲೂ ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ ಪರ್ವ ಪ್ರಾರಂಭವಾಗಿದ್ದು, ಬಿಜೆಪಿ ಅರಭಾವಿ ಮಂಡಲ ಸಾಮಾಜಿಕ ಜಾಲತಾಣ ಸದಸ್ಯ ಸ್ಥಾನಕ್ಕೆ ಅವಿನಾಶ್ ಹಿರೇಮಠ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರದುರ್ಗ,ಕೊಪ್ಪಳ ಸೇರಿ ಹಲವು ಜಿಲ್ಲೆಗಳಲ್ಲೂ ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ ಪರ್ವ ಶುರುವಾಗಿದೆ.

Key words: Condemnation –murder- Praveen Nettaru-resignation – BJP – workers.

ENGLISH SUMMARY..

Wide criticism on murder of Praveen Nettaru: Mass resignation by BJP office-bearers, activists
Bengaluru, July 28, 2022 (www.justkannada.in): The fort of patience of the BJP activists and office-bearers appears to have broken following the murder of BJP activist Praveen Nettaru. Many BJP office-bearers and activists across the state resigned condemning the murder incident.
Several district-level activists have given mass resignation expressing their deep anguish over the series of murder of BJP activists, despite the existence of BJP government in the state.
In Mysuru, the N.R. Constituency BJP Yuva Morcha President Lohith, followed by several activists have submitted their resignations. “We are scared to even post Praveen Nettaru’s photo in our WhatsApp satus. People will be scared to join the BJP in the coming days. Our families are anxious about our future. Hence, we are resigning form the party,” several claimed.
Chikkamagaluru District Yuva Mrocha President Sandeep Haravinangadi also submitted his resignation condemning the killing of Praveen Nettaru. Srinivas Gowda has resigned from the post of social media convener from Rajarajeshwarinagara circle. Likewise, a series of resignations by BJP activists has started in Belagavi, Chitradurga and Koppal too.
Keywords: BJP activists/ office-bearers/ BJP activist/ murder/ mass resignation