ಇಂದು ಮೈಸೂರಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾವೇಶ

ಮೈಸೂರು, ಮಾರ್ಚ್ 26, 2023 (www.justkannada.in): ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯ ಬೃಹತ್ ಸಮಾರೋಪ ಸಮಾವೇಶ ಇಂದು (ಮಾರ್ಚ್‌ 26ರಂದು) ಸಂಜೆ 4 ಗಂಟೆಗೆ ಮೈಸೂರಿನಲ್ಲಿ ನಡೆಯಲಿದೆ.

ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆಯುತ್ತಿರುವ ಪಂಚರತ್ನ ಸಮಾರೋಪಕ್ಕಾಗಿ ಶಾಸಕ ಜಿ.ಟಿ.

ದೇವೇಗೌಡರ ನೇತೃತ್ವದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದೆ.

ಪಂಚರತ್ನ ಸಮಾರೋಪ ಸಮಾವೇಶದಲ್ಲಿ ಪಕ್ಷದ, ಕಾರ್ಯಕರ್ತರು, ಮುಖಂಡರು ಪಾಲ್ಗೊಳ್ಳುತ್ತಿದ್ದು, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಪಾಲ್ಗೊಳ್ಳುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಪಂಚರತ್ನ ಸಮಾರೋಪ ಸಮಾರಂಭ ಆಯೋಜನೆ ಹಿಂದೆ ಎಚ್ ಡಿಕೆಗೆ ಸಿಎಂ ಪಟ್ಟ ಒಲಿಯುವ ಅದೃಷ್ಟದ ನಿರೀಕ್ಷೆ ಅಡಗಿದೆ.