ಶಾಸಕ ಸಿ.ಟಿ ರವಿ ವಿರುದ್ಧ ಕಾಂಗ್ರೆಸ್ ನಿಂದ ದೂರು ದಾಖಲು.

ಬೆಂಗಳೂರು,ನವೆಂಬರ್,29,2022(www.justkannada.in): ಸಿದ್ಧರಾಮಯ್ಯ ​ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆಯಾಗುತ್ತದೆ ಎಂದು ಹೇಳಿಕೆ ನೀಡಿದ್ದ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಗೆ  ಕಾಂಗ್ರೆಸ್​ ದೂರು ನೀಡಿದೆ.

ಕಾಂಗ್ರೆಸ್​ ಮುಖಂಡ ಎಸ್​​.ಮನೋಹರ್​ ನೇತೃತ್ವದಲ್ಲಿ ಶಾಸಕ ಸಿ.ಟಿ ರವಿ ವಿರುದ್ಧ ದೂರು ಸಲ್ಲಿಸಲಾಗಿದೆ. ಸಿ.ಟಿ.ರವಿ ಕಾನೂನು ಸುವ್ಯವಸ್ಥೆ ಕದಡುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಸಿ.ಟಿ.ರವಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.BL Santosh - selection -candidates - Rajya Sabha-minister-CT Ravi.

ಸಿ.ಟಿ ರವಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಶಾಸಕ ಸಿ.ಟಿ.ರವಿ ಕಮ್ಯೂನಲ್ ಫೆಲೊ, ಅವನಿಗೆ ಉತ್ತರ ಕೊಡಲ್ಲ. ಸಿ.ಟಿ.ರವಿ ಕ್ರಿಮಿನಲ್ ಫೆಲೊ, ಅವರಿಗೆ ಜಾತ್ಯತೀತ ತತ್ವ ಅರ್ಥ ಆಗಲ್ಲ. ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ, ಅವರಿಗೆ ಸಂವಿಧಾನ ಅರ್ಥ ಆಗಲ್ಲ ಎಂದು  ತಿರುಗೇಟು ನೀಡಿದರು.

Key words: Complaint- Congress- against –MLA- CT Ravi.