ಆ್ಯಕ್ಷನ್ ಪ್ರಿನ್ಸ್  ನಟ ಧ್ರುವ ಸರ್ಜಾ ವಿರುದ್ಧ ದೂರು

ಬೆಂಗಳೂರು,ಅಕ್ಟೋಬರ್,30,2025 (www.justkannada.in): ಆ್ಯಕ್ಷನ್ ಪ್ರಿನ್ಸ್  ನಟ ಧ್ರುವ ಸರ್ಜಾ ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಗೆ ಪಕ್ಕದ ಮನೆಯ ಯುವಕ ದೂರು  ನೀಡಿದ್ದಾರೆ.

ಮನೋಜ್ ಎಂಬುವರು ನಟ ಧ್ರುವ ಸರ್ಜಾ ಹಾಗೂ ಅವರ ಮ್ಯಾನೇಜರ್, ಅವರ ಕಾರು ಚಾಲಕ ಹಾಗೂ ಅಭಿಮಾನಿಗಳ ವಿರುದ್ಧವೂ ದೂರು ನೀಡಿದ್ದು ಎಫ್ ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಎನ್​​ಸಿಆರ್ ಅಷ್ಟೆ ದಾಖಲು ಮಾಡಿದ್ದಾರೆ.

ಮನೋಜ್ ಅವರು ಧ್ರುವ ಸರ್ಜಾ ಅವರ ನೆರೆ ಮನೆಯವರೇ ಆಗಿದ್ದು, ನಟ ಧ್ರುವ ಸರ್ಜಾ ಅಭಿಮಾನಿಗಳು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ನೀಡುತ್ತಿದ್ದಾರೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಧ್ರುವ ಸರ್ಜಾ ಅವರ ಮನೆಗೆ ಬರುವ ಅಭಿಮಾನಿಗಳು ರಸ್ತೆಯಲ್ಲಿ, ಮನೆಯ ಮುಂದೆ ಅಡ್ಡಾದಿಡ್ಡಿಯಾಗಿ ಗಾಡಿಗಳನ್ನು ಪಾರ್ಕ್ ಮಾಡುತ್ತಾರೆ. ಅಭಿಮಾನಿಗಳು ಮನೆಯ ಮುಂದೆ ಸಿಗರೇಟು ಸೇದುತ್ತಾರೆ, ಗುಟ್ಕಾ ಉಗಿಯುತ್ತಾರೆ, ಮನೆಯ ಗೋಡೆಗಳ ಮೇಲೆಯೂ ಉಗಿದಿದ್ದಾರೆ, ಗಲಾಟೆ ಮಾಡುತ್ತಾರೆ. ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗಿದೆ ಎಂದು ಮನೋಜ್ ದೂರಿನಲ್ಲಿ ಆರೋಪಿಸಿದ್ದಾರೆ.

Key words: Complaint, against, Action Prince, actor, Dhruva Sarja