Saturday, August 15, 2026

BDA Apartments

Home Front Page ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಒತ್ತಡವಿದೆ: ಸೂಕ್ತ ಕಾಲದಲ್ಲಿ ನಿರ್ಧಾರ- ಡಿ.ವಿ ಸದಾನಂದಗೌಡ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಒತ್ತಡವಿದೆ: ಸೂಕ್ತ ಕಾಲದಲ್ಲಿ ನಿರ್ಧಾರ- ಡಿ.ವಿ ಸದಾನಂದಗೌಡ.

ಬೆಂಗಳೂರು,ಜನವರಿ,1,2024(www.justkannada.in): ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಸುವಂತೆ ಒತ್ತಡ ಬರುತ್ತಿದೆ. ಆದರೆ ನಾನು ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಡಿ.ವಿ ಸದಾನಂದಗೌಡರು, 35 ವರ್ಷಗಳ ಸುದೀರ್ಘ ರಾಜಕೀಯ ನೋಡಿದ್ದೇನೆ. ಹೊಸಬರು ಬರಬೇಕೆಂಬ ಕಾರಣಕ್ಕೆ ದೂರ ಸರಿದಿದ್ದೇನೆ. ಮಾಜಿ ಸಿಎಂ ಬೊಮ್ಮಾಯಿ, ಆರ್.ಅಶೋಕ್, ಅಶ್ವಥ್ ನಾರಾಯಣ್,  ಎಸ್ ಟಿ  ಸೋಮಶೇಖರ್ ಭೇಟಿ ಮಾಡಿದ್ದಾರೆ.  ನನ್ನ ಇಡೀ ಲೋಕಸಭಾ ಕ್ಷೇತ್ರದಲ್ಲಿ ಒಂದೇ ಒಂದು ಮತದಾರರು ನನ್ನನ್ನು ಬೇಡ ಎಂದಿಲ್ಲ. ವಿರೋಧಿಸಿಲ್ಲ. ನನಗೆ ಖುಷಿ ಇದೆ. ನೋಡೋಣ ಮುಂದೆ ಏನಾಗುತ್ತದೆ ಎಂದು ತಿಳಿಸಿದರು.

ರಾಮ ಒಬ್ಬರಿಗೆ ಸೇರಿದವನಲ್ಲ. ನಾವು ಹಿಂದೂಗಳೆ ಎಂಬ ಗೃಹ ಸಚಿವ ಡಾ.ಜಿ.ಪರಮೇಶ್ವರ್  ಹೇಳಿಕೆ ಕುರಿತು ಪ್ರತಿಕ್ರಿಯಿಸಿದ   ಡಿ.ವಿ ಸದಾನಂದಗೌಡರು, , ಪರಮೇಶ್ವರ್ ಅವರಿಗೆ ಈಗ ಒಳ್ಳೆಯ ಬುದ್ಧಿ ಬಂದಿದೆ. ಅವರಿಗೆ ರಾಮ ಒಳ್ಳೆಯದು ಮಾಡಲಿ. ಅವರು ಕೂಡ ಬರಲಿ  ಎಂದರು.

Key words: compete – Lok Sabha -elections- DV Sadanand Gowda.