ಜನ ಬಯಸಿದರೇ ಚುನಾವಣೆಯಲ್ಲಿ ಸ್ಪರ್ಧೆ- ವಿಡಿಯೋ ರಿಲೀಸ್ ಮಾಡಿದ ಪಿಎಸ್ ಐ ಅಕ್ರಮ ಆರೋಪಿ ರುದ್ರಗೌಡ ಪಾಟೀಲ್.

ಕಲಬುರಗಿ,ಜನವರಿ,21,2023(www.justkannada.in):  ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ರುದ್ರಗೌಡ ಪಾಟೀಲ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನ ರುದ್ರಗೌಡ ಪಾಟೀಲ್ ಬಿಡುಗಡೆ ಮಾಡಿದ್ದು ಈ ವಿಡಿಯೋದಲ್ಲಿ ಜನ ಬಯಸಿದರೇ ಈ ಬಾರಿ ಅಫಜಲಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ನಾನು ಎಲ್ಲಿಯೂ ಓಡಿ ಹೋಗಿಲ್ಲಾ, ಇಲ್ಲೇ ಇದ್ದೇನೆ. ಇಡಿ ಅಧಿಕಾರಿಗಳು ಬಂದಾಗ ಅವರ ವಿಚಾರಣೆ ಎದುರಿಸಿದ್ದೇನೆ. ಇಡಿ ಅಧಿಕಾರಿಗಳು ಬಂದು ಹೋದ ಮೇಲೆ ನಾನು ಹೊರಗೆ ಹೋಗಿದ್ದೆ.

ಆಗ ಸಿಐಡಿ ಅಧಿಕಾರಿಗಳು ಮನೆಗೆ ಬಂದಿದ್ದಾರೆ. ನಾನು ಸಿಐಡಿ ಅಧಿಕಾರಿಗಳನ್ನು ತಳ್ಳಿ ಓಡಿ ಹೋಗಿದ್ದೇನೆ ಅನ್ನೋದು ಸುಳ್ಳು. ನಾನು ಈ ನೆಲದ ಕಾನೂನಿಗೆ ಗೌರವ ನೀಡುವ ಮನುಷ್ಯ. ರಾಜಕೀಯ ಕುತಂತ್ರದಿಂದ ನನ್ನನ್ನು ಸಿಲುಕಿಸಿದ್ದಾರೆ. ಪಿಎಸ್‌ ಐ ಪ್ರಕರಣದಲ್ಲಿ ನನ್ನನ್ನು ಮತ್ತು ನನ್ನ ಸಹೋದರನನ್ನು ಸಿಲುಕಿಸಿದ್ದಾರೆ. ಸಮಾಜ ಸೇವೆ, ಚುನಾವಣೆಗೆ ಬರಬಹುದು ಅನ್ನೋ ಭಯದಿಂದ ಸಿಲುಕಿಸಿದ್ದಾರೆ. ನನ್ನ ಅಭಿಮಾನಿಗಳು ಯಾರು ಭಯ ಪಡಬಾರದು. ಇಂತಹ ಇನ್ನು ಹತ್ತು ಸುಳ್ಳು ಕೇಸ್ ಹಾಕಿದ್ರು ನಾನು ಹೆದರಲ್ಲ . ನನ್ನ ವಿರುದ್ದ ಕುತಂತ್ರ ಮಾಡಿರುವವರಿಗೆ ಉತ್ತರ ನೀಡಲು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.

Key words: Compete- elections Rudra Gowda Patil- PSI –scam-accused