ಕೋವಿಡ್ ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಪರಿಹಾರ ಮಂಜೂರು.

ಬೆಂಗಳೂರು,ಜುಲೈ,21,2021(www.justkannada.in): ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ)ದ ಮನವಿ ಮೇರೆಗೆ, ಇತ್ತೀಚೆಗೆ ಕೋವಿಡ್ ಗೆ ಬಲಿಯಾದ ಚಾಮರಾಜನಗರ ಜಿಲ್ಲೆಯ ರೇಷ್ಮೆನಾಡು ಪತ್ರಿಕೆಯ ಸದಾಶಿವ ಘಟ್ಟವಾಡಿಪುರ ಮತ್ತು ಬೀದರ್ ಜಿಲ್ಲೆಯ ಪೋಟೋ ಜರ್ನಲಿಸ್ಟ್ ಮಾರುತಿ ರಾವ್ ತಂದಾಳೆ, ವಿಜಯಪುರ ಜಿಲ್ಲೆಯ ಗುಂಬಜ್ ಎಕ್ಸ್‌ಪ್ರೆಸ್‌ ನ ದತ್ತಾತ್ರೇಯ ಫನಳಾಕರ್ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ.jk

ಸದಾಶಿವ ಘಟ್ಟವಾಡಿಪುರ ಅವರಿಗೆ ಪರಿಹಾರ ಕೊಡಿಸುವಂತೆ ಚಾಮರಾಜನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಮಾರುತಿ ರಾವ್ ತಂದಾಳೆ ಅವರಿಗೆ ಪರಿಹಾರ ಮಂಜೂರು ಮಾಡುವಂತೆ ಬೀದರ್ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ದತ್ತಾತ್ರೇಯ ಫನಳಾಕರ್ ಅವರಿಗೆ ಪರಿಹಾರ ನೀಡುವಂತೆ ವಿಜಯಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘಗಳು, ರಾಜ್ಯ ಸಂಘಕ್ಕೆ ಮನವಿ ಮಾಡಿದ್ದವು.

ಕೆಯುಡಬ್ಲ್ಯೂಜೆ ಮನವಿ ಪರಿಗಣಿಸಿ ಪರಿಹಾರ ಮಂಜೂರು ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Key words: compensation –corona-death-journalists – family