ಬೆಳಗಾವಿ ಜಿಲ್ಲಾ ವಿಭಜನೆಗೆ ನಾವು ಬದ್ಧ: ಸಚಿವ ಸತೀಶ್ ಜಾರಕಿಹೊಳಿ.

ಬೆಳಗಾವಿ,ಮೇ,30,2023(www.justkannada.in):  ನಾವು ಬೆಳಗಾವಿ ಜಿಲ್ಲಾ ವಿಭಜನೆಗೆ ಬದ್ಧರಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ಬೆಳಗಾವಿ ಜಿಲ್ಲೆ ವಿಭಜನೆ ಆಗಲೇಬೇಕು ಅದರಲ್ಲಿ ಪ್ರಶ್ನೆ ಇಲ್ಲ. ಬಹಳದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ನಡೆಸುವುದು ಅಷ್ಟು ಸುಲಭ ಅಲ್ಲ. ಜಿಲ್ಲಾ ವಿಭಜನೆ ಬಗ್ಗೆ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇವೆ ಎಂದರು.

ಜಿಲ್ಲೆ ವಿಭಜನೆಯಾದರೂ ಮೂರು ಜಿಲ್ಲೆ ಒಳಗೆ  ಪ್ರವೇಶವಿದೆ ಇದೆ. ಗೋಕಾಕ್ ಆದರೂ, ಚಿಕ್ಕೋಡಿ ಆದರೂ ಮೂರು ಜಿಲ್ಲೆಯಾದರೂ ನನ್ನದು ಎಂಟ್ರಿ ಇದೆ. ಜಿಲ್ಲಾ ವಿಭಜನೆ ಬೇಡಲು ಎಲ್ಲರಿಗೂ ಹಕ್ಕಿದೆ ಬೇಡಲಿ ಎಂದರು.

ಗೃಹಲಕ್ಷ್ಮೀ ಯೋಜನೆಯಡಿ ಯಜಮಾನಿಗೆ 2 ಸಾವಿರ ರೂ. ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಎರಡು ಸಾವಿರ ಯಾರು ತೆಗೆದುಕೊಳ್ಳಬೇಕೆಂದು ಷರತ್ತು ಹಾಕಬೇಕು ಅಲ್ವಾ? ಅತ್ತೆ ಸೊಸೆಗೆ ಕೊಡಿ ಅಂತಾ ಹೇಳಿದರೂ ಷರತ್ತು ಆಗುತ್ತದೆ. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮೊದಲು ಅತ್ತೆಗೆ ಕೊಡುವುದು. ಅತ್ತೆ ಪ್ರೀತಿಯಿಂದ ಸೊಸೆಗೆ ಕೊಡುವುದಾದರೆ ಅದನ್ನು ಬರೆಯಬೇಕಾಗುತ್ತದೆ  ಎಂದು ಹೇಳಿದರು.

Key words: committed –division-Belgaum district-Minister-Sathish Jarakiholi.