Friday, October 23, 2026

Dasara Wishes

Happy Dasara
Home Cinema ಅಮೆಜಾನ್ ಪ್ರೈಂಗೆ ಬರುತ್ತಿದೆ ಮಣಿರತ್ಂ ‘ಪೊನ್ನಿಯನ್ ಸೆಲ್ವನ್ -1’

ಅಮೆಜಾನ್ ಪ್ರೈಂಗೆ ಬರುತ್ತಿದೆ ಮಣಿರತ್ಂ ‘ಪೊನ್ನಿಯನ್ ಸೆಲ್ವನ್ -1’

ಬೆಂಗಳೂರು, ಅಕ್ಟೋಬರ್ 28, 2022 (www.justkannada.in): ಐತಿಹಾಸಿಕ ಕಥಾಹಂದರ ಹೊಂದಿರುವ, ಖ್ಯಾತ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯನ್ ಸೆಲ್ವನ್ -1’ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

ಹೌದು.  ವಿಶ್ವದೆಲ್ಲೆಡೆ ಉತ್ತಮ ಪ್ರಶಂಸೆ ಪಡೆದ ಚಿತ್ರವು ಇದೀಗ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಾಗುತ್ತಿದೆ. ಅಮೇಜಾನ್ ಪ್ರೈಮ್ ವೇದಿಕೆಯಲ್ಲಿಯೂ ಚಿತ್ರ ರಿಲೀಸ್ ಆಗುತ್ತಿದೆ.

‘ಪೊನ್ನಿಯನ್ ಸೆಲ್ವನ್ -1’ ಚಿತ್ರ ನಿರೀಕ್ಷೆಯಂತೆಯೇ ಭರ್ಜರಿ ಯಶಸ್ಸು ಗಳಿಸಿದೆ. ಬಿಡುಗಡೆಯಾಗಿ ಒಂದು ತಿಂಗಳ ಅವಧಿಯಲ್ಲಿ ಚಿತ್ರ ವಿಶ್ವದಾದ್ಯಂತ 500 ಕೋಟಿ ರೂ ಕಲೆಕ್ಷನ್ ಮಾಡಿದೆ.

ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್, ವಿಕ್ರಮ್, ಕಾರ್ತಿ, ತ್ರಿಶಾ, ಜಯಂ ರವಿ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.