ಹಾಸ್ಯ ನಟ ಉಮೇಶ್‌ ಅವರಿಗೆ ಕ್ಯಾನ್ಸರ್

ಬೆಂಗಳೂರು,ಅಕ್ಟೋಬರ್,13,2025 (www.justkannada.in):  ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಉಮೇಶ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

ಹಾಸ್ಯ ನಟ ಉಮೇಶ್ ಅವರು ಶುಕ್ರವಾರ ತಮ್ಮ ಮನೆಯ ಬಾತ್ ರೂಂನಲ್ಲಿ 2500 ಬಿದ್ದು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಉಮೇಶ್ ಅವರನ್ನು ಪರೀಕ್ಷಿಸಿದಾಗ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಉಮೇಶ್ ಅವರಿಗೆ 80 ವರ್ಷ ವಯಸ್ಸಾಗಿದೆ. ಕ್ಯಾನ್ಸರ್ ರೋಗವನ್ನು ದೃಢಪಡಿಸಿಕೊಳ್ಳಲು ಮತ್ತಷ್ಟು ಪರೀಕ್ಷೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಉಮೇಶ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯಲ್ಲಿ ಜಾರಿ ಬಿದ್ದಿದ್ದ ಉಮೇಶ್ ಅವರ ಸೊಂಟದ ಮೂಳೆಗೆ ಪೆಟ್ಟಾಗಿತ್ತು. ಹೀಗಾಗಿ, ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ತಯಾರಿ ನಡೆಸಿದ್ದರು. ಈ ವೇಳೆ ಲಿವರ್‌ ನಲ್ಲಿ ಗಡ್ಡೆಯೊಂದು ಪತ್ತೆಯಾಗಿದೆ. ಕಿಮೋಥೆರಪಿ, ಇಮಿನೋಥೆರಪಿ ಮಾಡಬೇಕಾಗಿದೆ. ಚುಚ್ಚುಮದ್ದು ನೀಡುವ ಮೂಲಕ ಗಡ್ಡೆ ಕರಗಿಸಲು ಪ್ರಯತ್ನಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

Key words: Kannada, Comedian, Umesh, cancer