Saturday, August 22, 2026

BDA Apartments

Home Front Page ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯಗೆ ಗೊತ್ತಾಗಿದೆ- ಶಾಸಕ ಜಿ.ಟಿ ದೇವೇಗೌಡ ಟೀಕೆ.

ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯಗೆ ಗೊತ್ತಾಗಿದೆ- ಶಾಸಕ ಜಿ.ಟಿ ದೇವೇಗೌಡ ಟೀಕೆ.

ಬೆಂಗಳೂರು,ಏಪ್ರಿಲ್,2,2024 (www.justkannada.in): 60 ಸಾವಿರ ಮತಗಳ  ಅಂತರದಲ್ಲಿ ಗೆದ್ದರೆ ನನ್ನನ್ನು ಯಾರು ಮುಟ್ಟುವುದಿಲ್ಲ ಎಂದು ನಿನ್ನೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಕುರಿತು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಟೀಕಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಸಿಎಂ ಬದಲಾವಣೆಯಾಗುತ್ತೆ  ಎಂದು ಹಿಂದೆ ಕಾಂಗ್ರೆಸ್ ನವರೇ ಹೇಳುತ್ತಿದ್ದರು. ಎಂಪಿ  ಚುನಾವಣೆಯಲ್ಲಿ ಬಹುಮತ  ಬರಲ್ಲ ತಾನೂ ಬದಲಾಗೋದು ಗ್ಯಾರಂಟಿ ಎನ್ನವುದು ಸಿಎಂಗೆ ಗೊತ್ತಾಗಿದೆ. ಸಿಎಂ ಬದಲಾವಣೆಯಾಗುತ್ತೆ ಎಂದು ಸಿದ್ದರಾಮಯ್ಯಗೆ ಗೊತ್ತಾಗಿದೆ ಎಂದು ಲೇವಡಿ ಮಾಡಿದರು.

ರಾಜ್ಯದ 28 ಕ್ಷೇತ್ರಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾಲೋಚನೆ ನಡೆಸಲಿದ್ದಾರೆ. ಎರಡೂ ಪಕ್ಷಗಳ ಜೊತೆ ಚರ್ಚಿಸಲಿದ್ದಾರೆ ಎಂದರು.

Key words:CM, Siddaramaiah, MLA, GT DeveGowda