ಮನೆಹಾನಿ ಪರಿಹಾರಕ್ಕೆ ಮನವಿ: ಜಿ.ಪಂನಿಂದ ಅಕ್ರಮ ಮನೆ ಪ್ರವೇಶ ಕುರಿತು ದೂರು: ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಸೂಚನೆ.

ಬೆಂಗಳೂರು,ನವೆಂಬರ್,27,2023(www.justkannada.in):  ಸಿಎಂ ಸಿದ್ದರಾಮಯ್ಯ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ಏರ್ಪಡಿಸಿ ಜನರ ಸಮಸ್ಯೆಗಳನ್ನ ಆಲಿಸಿ ಕ್ರಮಕ್ಕೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸುತ್ತಿದ್ದಾರೆ.

ಜನತಾ ದರ್ಶನದಲ್ಲಿ ಸಾವಿರಾರು ಜನರು ತಮ್ಮ ತಮ್ಮ ಸಮಸ್ಯೆಗಳನ್ನ ಸಿಎಂ ಬಳಿಗೆ ಹೊತ್ತು ತಂದಿದ್ದಾರೆ. ಈ ನಡುವೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ  ನಸೀಮಾ. ಬಾನು ಅವರು ಜಿಲ್ಲಾ ಪಂಚಾಯಿತಿ  ತಮ್ಮ ಮನೆಯನ್ನು ಅಕ್ರಮವಾಗಿ ಪ್ರವೇಶ ಮಾಡಿರುವ ಬಗ್ಗೆ ದೂರು ಸಲ್ಲಿಸಿದರು.

ಹಾಗೆಯೇ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಡಿ.ಪಿ.ಭಾಗ್ಯ ಅವರ ಮನೆ ಶೇ 60 % ಹಾನಿಯಾಗಿದ್ದು ಶೇ 100 ರ ಪರಿಹಾರ ಒದಗಿಸಿಕೊಡುವಂತೆ  ಡಿಪಿ ಭಾಗ್ಯ ಅವರು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು .

ಈ ಮನವಿಗಳನ್ನು ಆದ್ಯತೆ ಮೇಲೆ ಪರಿಗಣಿಸಿ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

Key words:  CM Siddaramaiah-janathadarshan- instructs -take action.