Thursday, September 17, 2026

BDA Apartments

Home Front Page ಸಿಎಂ ಸಿದ್ದರಾಮಯ್ಯ  ಬಿಸ್ಕೆಟ್ ಹಾಕಿ ದಲಿತ ನಾಯಕರನ್ನು ಖರೀದಿಸಿದ್ದಾರೆ- ಮಾಜಿ ಸಂಸದ ಮುನಿಸ್ವಾಮಿ

ಸಿಎಂ ಸಿದ್ದರಾಮಯ್ಯ  ಬಿಸ್ಕೆಟ್ ಹಾಕಿ ದಲಿತ ನಾಯಕರನ್ನು ಖರೀದಿಸಿದ್ದಾರೆ- ಮಾಜಿ ಸಂಸದ ಮುನಿಸ್ವಾಮಿ

ಬೆಂಗಳೂರು,ಜುಲೈ,18,2024 (www.justkannada.in): ದಲಿತರಿಗೆ ಮೀಸಲಿಟ್ಟ ಹಣವನ್ನ ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆದಿದೆ. ದಲಿತ ನಾಯಕರನ್ನು ಬಿಸ್ಕೆಟ್ ಹಾಕಿ ಸಿದ್ದರಾಮಯ್ಯ ಖರೀದಿಸಿದ್ದಾರೆ ಎಂದು ಮಾಜಿ ಸಂಸದ ಮುನಿಸ್ವಾಮಿ ವಾಗ್ದಾಳಿ ನಡೆಸಿದರು.

ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣ ಮತ್ತು ಮುಡಾ ಹಗರಣ ಖಂಡಿಸಿ ಫ್ರೀಡಂಪಾರ್ಕ್ ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದ್ದು ಈ ವೇಳೆ ಮಾತನಾಡಿದ ಮಾಜಿ ಸಂಸದ ಮುನಿಸ್ವಾಮಿ, ದಲಿತರಿಗೆ ಮೀಸಲಿಟ್ಟ ಹಣವನ್ನ ಗ್ಯಾರಂಟಿ ಯೋಜನೆಗೆ  ಕಾಂಗ್ರೆಸ್ ಸರ್ಕಾರ ಬಳಸಿಕೊಂಡಿದೆ. ಎಸ್ ಸಿ ಎಸ್ಟಿ ಸಮುದಾಯದ ಹಣ ಲೂಟಿ ಹೊಡೆದಿದೆ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.ಸಿಎಂ ಸಿದ್ದರಾಮಯ್ಯ ಬಿಸ್ಕೆಟ್ ಹಾಕಿ ದಲಿತ ನಾಯಕರನ್ನು ಖರೀದಿಸಿದ್ದಾರೆ muniswamy

ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದ ಖಳನಾಯಕ ಸಿದ್ದರಾಮಯ್ಯ. ಸಿದ್ಧರಾಮಯ್ಯ ಖರ್ಗೆಯವರು ಸಿಎಂ ಆಗುವುದನ್ನು ತಪ್ಪಿಸಿದ್ದಾರೆ ಹಾಗಾಗಿ ಅವರು ಒಬ್ಬ ಖಳನಾಯಕ. ಸಿದ್ದರಾಮಯ್ಯ ಅಹಿಂದ ನಾಯಕ ಅಲ್ಲ. ಅಹಿಂದ ವಿರೋಧಿ ನಾಯಕ ಎಂದು ಕಿಡಿಕಾರಿದರು.

Key words: CM Siddaramaiah, Dalit leaders, biscuits, Muniswamy