ಜಾತಿ ಗಣತಿಯೋ ಶೈಕ್ಷಣಿಕ ಗಣತಿಯೋ ಎಂಬ ಬಗ್ಗೆ ಸಿಎಂ ಸಿದ್ಧರಾಮಯ್ಯ ಸ್ಪಷ್ಟಪಡಿಸಲಿ- ಬಸವರಾಜ ಬೊಮ್ಮಾಯಿ ಆಗ್ರಹ.

ಹಾವೇರಿ, ಅಕ್ಟೋಬರ್​,7,2023(www.justkannada.in):  ಜಾತಿ ಗಣತಿ ವರದಿ ಬಗ್ಗೆ ನಮ್ಮಲ್ಲಿ ಚರ್ಚೆಯೇ ಆಗಿಲ್ಲ. ಜಾತಿ ಗಣತಿಯೋ? ಶೈಕ್ಷಣಿಕ ಗಣತಿಯೋ? ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಡಲಿ  ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಇದು ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ, ಜಾತಿ ಗಣತಿ ಅಲ್ಲ ಎಂದು ಹೇಳಿದ್ದಾರೆ. ಸದ್ಯ ಜಾತಿ ಗಣತಿ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಒತ್ತಾಯಿಸಲಾಗಿದೆ ಎಂದರು.

ಬರಪರಿಸ್ಥಿತಿ ಸಮರ್ಥವಾಗಿ ಎದುರಿಸುತ್ತೇವೆ ಎಂಬ ಸರ್ಕಾರದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಬರೀ ಹೇಳಿಕೆಯಿಂದ ಬರಗಾಲ ಸಮರ್ಥವಾಗಿ ಎದುರಿಸುವುದಕ್ಕೆ ಆಗುವುದಿಲ್ಲ. ನಾವು ಯಾವುದಕ್ಕೂ ಕಾಯಲಿಲ್ಲ. ನಾವು ಕೂಡಲೆ ಹಣ ಕೊಟ್ಟು ಪರಿಹಾರ ನೀಡಿದ್ದೇವೆ. ಸುಮಾರು 2 ಸಾವಿರ ಕೋಟಿಗೂ ಅಧಿಕ ಹಣ ತಕ್ಷಣ ಬಿಡುಗಡೆ ಮಾಡಿದ್ದೆವು. ರಾಜ್ಯದ ಬೊಕ್ಕಸದಿಂದಲೇ ಸಹಾಯ ಮಾಡಬಹುದು. ಇಲ್ಲಾ ಎಂದರೆ ಕುಂಟು ನೆಪ ಹೇಳಿ ಮುಂದಕ್ಕೆ ಹಾಕಬಹುದು ಎಂದು ಕಿಡಿಕಾರಿದರು.

Key words:  CM Siddaramaiah -clarify – caste census – educational census – Basavaraja Bommai