2 ಗಂಟೆ 50 ನಿಮಿಷ ಬಜೆಟ್ ಮಂಡಿಸಿದ ಸಿಎಂ ಸಿದ್ಧರಾಮಯ್ಯ:  ವಿಧಾನಸಭೆ ಕಲಾಪ ಮುಂದೂಡಿಕೆ.

ಬೆಂಗಳೂರು,ಜುಲೈ,7,2023(www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟ್ ಮಂಡನೆ ಮಾಡಿದ್ದು, ಮದ್ಯದ ಮೇಲಿನ ಸುಂಕವನ್ನು ಹೆಚ್ಚಳ ಮಾಡಿದ್ದು, ರೈತರು ಮಹಿಳೆಯರು, ಆರೋಗ್ಯ,ಕೃಷಿ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ.

ಇಂದು ವಿಧನಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಸುಮಾರು 2 ಗಂಟೆ 50 ನಿಮಿಷ ಬಜೆಟ್ ಮಂಡಿಸಿದರು. ಇದು ಅವರು 14ನೇ ಬಾರಿ ಮಂಡಿಸಿದ ಬಜೆಟ್ ಆಗಿದ್ದು ಸಿಎಂ ಆಗಿ 7ನೇ ಬಜೆಟ್ ಆಗಿದೆ. ಬಜೆಟ್ ಮಂಡನೆ ಬಳಿಕ ಅಂಗೀಕಾರ ಮಾಡುವಂತೆ ಮನವಿ ಮಾಡಿದರು. ಸಿಎಂ ಸಿದ್ಧರಾಮಯ್ಯಗೆ ಸಂಪುಟ ಸದಸ್ಯರು, ಶಾಸಕರು ಅಭಿನಂದನೆ ಸಲ್ಲಿಸಿದರು.

ಬಳಿಕ ವಿಧಾನಸಭೆ ಕಲಾಪವನ್ನ ಸ್ಪೀಕರ್ ಯು.ಟಿ ಖಾದರ್ ಸೋಮವಾರಕ್ಕೆ ಮುಂದೂಡಿಕೆ ಮಾಡಿದರು.

Key words: CM Siddaramaiah – budget – Adjournment – assembly