ಬೆಂಗಳೂರು,ಜನವರಿ,6,2026: (www.justkannada.in): ದೀರ್ಘಾವಧಿವರೆಗೆ ಸಿಎಂ ಆಗುವ ಮೂಲಕ ಮಾಜಿ ಸಿಎಂ ದಿ. ದೇವರಾಜ ಅರಸು ಅವರ ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ ಅವರಿಗೆ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪತ್ರ ಬರೆದು ಶುಭಹಾರೈಸಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಶಾಸಕ ಬಸವರಾಜ ರಾಯರೆಡ್ಡಿ,ರಾಜ್ಯದಲ್ಲಿ ಸುದೀರ್ಘ ಮತ್ತು ಸಾರ್ಥಕ ಆಡಳಿತ ಮೂಲಕ ಚಾರಿತ್ರಿಕ ದಾಖಲೆ ನಿರ್ಮಿಸುತ್ತಿರುವುದು ರಾಜ್ಯದ ಜನತೆಗೆ ಹೆಮ್ಮೆ. 2028ರವರೆ ಸಿಎಂ ಆಗಿ ಅಭಿವೃದ್ದಿಗೆ ಶ್ರಮಿಸುತ್ತೀರಿ ಎಂಬುದು ನನ್ನ ನಂಬಿಕೆ.
ನಿಮ್ಮ ಪ್ರಮಾಣಿಕ ಪಾರದರ್ಶಕ, ಆಡಳಿತ ಸ್ಪಷ್ಟವಾಗಿ ಜನಪರವಾಗಿದೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಮನ್ವಯ ರಾಜಕಾರಣ ಗುಣ ನಿಮ್ಮದು . ನಿಮ್ಮನ್ನು ಗೌರವದಿಂದ ಇತಿಹಾಸ ಪುಟಗಳಲ್ಲಿ ಸ್ಮರಿಸುವುದು ಖಚಿತ. ನಿಮ್ಮ ಆಡಳಿತ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದು ಬಸವರಾಜ ರಾಯರೆಡ್ಡಿ ಶುಭ ಹಾರೈಸಿದ್ದಾರೆ.
Key words: Longest, tenure ,s CM, Siddaramaiah, wishing, Basavaraja Rayareddy







