ಹಾಸನ, ಅಕ್ಟೋಬರ್,15,2025 (www.justkannada.in): ವರ್ಷಕ್ಕೊಂದು ಒಂದು ಬಾರಿ ತೆರೆಯುವ ಹಾಸನಾಂಬೆ ದೇಗುಲಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ನೀಡಿ ಹಾಸನಾಂಬೆಯ ದರ್ಶನ ಪಡೆದರು.
ಹಾಸನಾಂಬೆಗೆ ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಸಚಿವರಾದ ರಾಮಲಿಂಗರೆಡ್ಡಿ, ಕೃಷ್ಣಭೈರೇಗೌಡ ಶಾಸಕ ಶಿವಲಿಂಗೇಗೌಡ ಸಾಥ್ ನೀಡಿದರು. ಕಳೆದ ವರ್ಷವೂ ಕೂಡ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು.
ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಹಾಸನಾಂಬೆ ದೇಗಲಕ್ಕೆ ಭೇಟಿ ನೀಡಿ ಹಾಸನಾಂಬೆಯ ದರ್ಶನ ಪಡೆದಿದ್ದರು.
Key words: CM, Siddaramaiah, offers, special prayers , Hasanamba