ರಾಜ್ಯಪಾಲರು ರಾಷ್ಟ್ರಗೀತೆ ಹಾಡದೆ ಹೋಗಿದ್ದು ಸಂವಿಧಾನದ ಉಲ್ಲಂಘನೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜನವರಿ,23,2026 (www.justkannada.in):  ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ರಾಷ್ಟ್ರಗೀತೆ ಹಾಡದೇ ಹೋಗಿದ್ದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿನ್ನೆ ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಒಂದೇ ಸಾಲಿನಲ್ಲಿ ಭಾಷಣ ಮಾಡಿ ಹೊರಟು ಹೋದ ವಿಚಾರ ಇಂದು ವಿಧಾನಮಂಡಲ ಉಭಯ ಸದನಗಳಲ್ಲಿ ಚರ್ಚೆಯಾಗುತ್ತಿದೆ.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಆಷ್ಟು ಆತುರಾತುರವಾಗಿ ಹೋಗಬಾರದು. ಅವರು ಯಾರ ರಾಜ್ಯಪಾಲರೂ ಅಲ್ಲ. ಸಂವಿಧಾನದ ಮುಖ್ಯಸ್ಥ ರಾಜ್ಯಪಾಲರು ರಾಷ್ಟ್ರಗೀತೆ ಹಾಡಿ ಹೋಗಬೇಕಿತ್ತು.  ಎಷ್ಟೇ ಭಾಷಣ ಮಾಡಲಿ ಆದ್ರೆ  ರಾಷ್ಟ್ರಗೀತೆ ಹಾಡಬೇಕಿತ್ತು.  ರಾಷ್ಟ್ರ ಗೀತೆ ಹಾಡದೆ ಯಾಕೆ ಹೋಗಬೇಕಿತ್ತು. ಇದು ಸಂಬವಿಧಾನದ ಉಲ್ಲಂಘನೆ ಆಗಿದೆ ನಾನು ಅವರ ಹಿಂದೆ ಓಡಿ ಹೋದೆ ಗೊತ್ತಾ ಸಿಎಂ ಸಿದ್ದರಾಮಯ್ಯ ತಿಳಿಸಿದರು

ಗವರ್ನರ್ ನಿಮ್ಮರಲ್ಲ ನಮ್ಮವರಲ್ಲ ಗವರ್ನರ್ ರಾಷ್ಟ್ರಗೀತೆ ಮುಗಿಯವವರೆಗೆ ಇರಬೇಕಿತ್ತು. ಯಾಕೆ ಹೋದ್ರು ಎಂದು ಸಿಎಂ ಸಿದ್ದರಾಮಯ್ಯ  ಬಿಜೆಪಿ ಸದಸ್ಯರಿಗೆ ಪ್ರಶ್ನಿಸಿದರು.

Key words: Governor, national anthem, violation, Constitution, CM Siddaramaiah