ಮೈಸೂರು,ಡಿಸೆಂಬರ್,30,2025 (www.justkannada.in): ಇತ್ತೀಚೆಗೆ ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸ್ಪೋಟದಿಂದ ಮೂವರು ಮೃತಪಟ್ಟಿದ್ದು ಇದೀ ಇಡೀ ರಾಜ್ಯಾದ್ಯಂತ ಇದು ಸುದ್ದಿಯಾಗಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಈ ಘಟನೆ ಬಗ್ಗೆ ಎಲ್ಲಿಯೂ ತುಟಿ ಬಿಚ್ಚಿಲ್ಲ.
ಹೌದು, ಅರಮನೆ ಮುಂಭಾಗ ನಡೆದ ಈ ಭೀಕರ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಎಲ್ಲಿಯೂ ಮಾತನಾಡಿಲ್ಲ. ಜೊತೆಗೆ ಮೃತಪಟ್ಟವರಿಗೆ ಸಂತಾಪವನ್ನೂ ಕೂಡ ಸೂಚಿಸಿಲ್ಲ. ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟವರಿಗೆ ಪರಿಹಾರವನ್ನೂ ಸಹ ನೀಡಲಾಗಿಲ್ಲ.
ಸಿಲಿಂಡರ್ ಸ್ಪೋಟದ ದಿನವೇ ನಡೆದ ಚಿಕ್ಕಬಳ್ಳಾಪುರದ ಅಜ್ಜವಾರದ ಬಳಿ ಬೈಕ್ ಅಪಘಾತದ ಘಟನೆಯೊಂದು ನಡೆದಿತ್ತು. ಈ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದರು. ಸಂತಾಪದ ಜೊತೆಗೆ ಅಫಘಾತದಲ್ಲಿ ಮೃತಪಟ್ಟ 4 ಜನ ಯುವಕರಿಗೂ ಮುಖ್ಯಮಂತ್ರಿಗಳಿಂದ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು.
ಆದರೆ ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿ ನಡೆದ ಘಟನೆಗೆ ಪರಿಹಾರವಿರಲಿ. ಸಂತಾಪವನ್ನೂ ಕೂಡ ಸಿಎಂ ಸಿದ್ದರಾಮಯ್ಯ ಸೂಚಿಸಿಲ್ಲ. ಈ ಮೂಲಕ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬಂತೆ ತಮ್ಮ ತವರು ಜಿಲ್ಲೆಯನ್ನೇ ಸಿಎಂ ಸಿದ್ದರಾಮಯ್ಯ ಮರೆತರಾ ಎನ್ನುವ ಅನುಮಾನ ಮೂಡಿದೆ.
ಮೈಸೂರು ಸಿಲಿಂಡರ್ ಸ್ಪೋಟದಿಂದ ಬಲೂನ್ ಮಾರಾಟಗಾರನ ಜೊತೆಗೆ ಅಮಾಯಕ ಇಬ್ಬರು ಪ್ರವಾಸಿಗರು ಮೃತರಾಗಿದ್ದರು.
Key words: Mysore, helium, explosion, CM Siddaramaiah







